ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ಆಶ್ರಯದಲ್ಲಿ 13 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಮಡೆಯಿತು.
ಬಾಲ್ಯದಲ್ಲೇ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಒಳಗೊಂಡ ವಿಷಯಗಳನ್ನು ತಿಳಿಯಪಡಿಸಿ ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ನಡೆಸುವಂತೆ ಪ್ರೇರೇಪಿಸಬೇಕು.
ಮಾತೆಯರೆಲ್ಲ ಸುರುಚಿಯಂತಾಗದೆ ಸುನೀತಿಯಂತಾಗಿ ಧ್ರುವಕುಮಾರನಂತಹ ಪೀಳಿಗೆಯಿಂದ ಬಲಿಷ್ಠ ಭಾರತ, ಶ್ರೇಷ್ಠಭಾರತ, ಜಗದ್ಗುರು ಭಾರತವನ್ನಾಗಿಸಿ ತ್ಯಾಗದಿಂದ ಶಾಂತಿಯಿಂದ ಸಮೃದ್ಧಿಯನ್ನು ಬೆಳೆಸೋಣ. ಮಾತೃಶಕ್ತಿ ಜಾಗೃತವಾದಾಗ ದೇಶದ ಪ್ರಗತಿ ಸಾಧ್ಯ ಎಂದು ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ಅವರು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ ಸ್ಥಾನವನ್ನು ಡಾ.ಶ್ರೀಧರ ಭಟ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಭಟ್, ಜಗದೀಶ್ ಮೂಡಂಬೈಲ್ ಭಾಗವಹಿಸಿದರು.
ಮಾತೃಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದಂತಹ ಆಶಾಲತ ಬಿ.ಎಂ. ಅವರು ಈಗ ಮಂಜೇಶ್ವರ ಬ್ಲಾಕ್ ಸದಸ್ಯೆಯಾಗಿ ಚುನಾಯಿತರಾಗಿದ್ದು, ಅವರಿಗೆ ಮಂಡಳಿಯ ವತಿಯಿಂದ ಸಮ್ಮಾನಿಸಲಾಯಿತು.
ಮಂಡಳಿಯ ಅಧ್ಯಕ್ಷೆ ಕಮಲಾಕ್ಷಿ ಸಂತಡ್ಕ ಉಪಸ್ಥಿತರಿದ್ದರು. ದಿವ್ಯ ಸುರೇಶ್ ಅವರ ವತಿಯಿಂದ ಅನ್ನದಾನ ಸೇವೆ ನಡೆಯಿತು. ಜಯ ಈಶ್ವರ ನಾಯ್ಕ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Click this button or press Ctrl+G to toggle between Kannada and English