ಮುಳ್ಳೇರಿಯ: ‘ನರೇಂದ್ರ ಮೋದಿ ವಿಚಾರ್ ಮಂಚ್’ ಎಂಬ ಬೋರ್ಡ್ ತೂಗಿಸಿ ಬಂದ ಕಾರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದ ಘಟನೆ ಗುರುವಾರ ಮುಳ್ಳೇರಿಯಾದಲ್ಲಿ ನಡೆದಿದೆ.
ಕಾಸರಗೋಡು ಆರ್‌ಟಿಒ ಕಛೇರಿ ಯಲ್ಲಿ ನೋಂದಾಯಿಸಲ್ಪಟ್ಟ ಕಾರಿನಲ್ಲಿ ನರೇಂದ್ರ ಮೋದಿ ವಿಚಾರ್ ಮಂಚ್, ಕೇರಳ ಸ್ಟೇಟ್ ಪ್ರೆಸಿಡೆಂಟ್ ‘ಯುವ’ ಎಂದು ಬೋರ್ಡ್ ತೂಗಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಈ ಕಾರು ಮುಳ್ಳೇರಿಯ ಪರಿಸರದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಾರನ್ನು ತಡೆದು ಹಿಡಿಯಲಾಯಿತು. ಕಾರಿನಲ್ಲಿದ್ದ ಚೆನ್ನೈ ನಿವಾಸಿ ರಾದಾ ಮುಹಮ್ಮದ್ ನನ್ನು ವಿಚಾರಣೆ ನಡೆಸಿದಾಗ ಈತ ತದ್ವಿರುದ್ಧ ಹೇಳಿಕೆ ನೀಡಿದ್ದರಿಂದ ಪೋಲೀಸರಿಗೆ ಮಾಹಿತಿ ನೀಡಲಾಯಿತು.
ಆದೂರು ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದಾಗ ಈತ ಮಂಗಳೂರಿನಲ್ಲಿ ಯುವಜನ ಸಂಘಟನೆಯೊಂದರ ಪದಾಧಿಕಾರಿ ಯೆಂದೂ, ಕಾರಿನಲ್ಲಿ ಇಂತಹ ಬೋರ್ಡ್ ಹಾಕಲು ಅನುಮತಿಯಿ ಲ್ಲವೆಂದು ತಿಳಿದು ಬಂತು.
ಈ ಹಿನ್ನೆಲೆಯಲ್ಲಿ ಈತನ ಕಾರಿನಲ್ಲಿದ್ದ ಬೋರ್ಡ್ ತೆಗೆದು ಕಳುಹಿಸಲಾ ಯಿತೆಂದು ಆದೂರು ಪೊಲೀಸರು ತಿಳಿಸಿದ್ದಾರೆ. ಆದರೆ ಈತನ ಮುಳ್ಳೇರಿಯಾ ಪ್ರಯಾಣದ ಹಿಂದೆ ನಿಗೂಢತೆಯಿದೆ ಯೆಂದೂ ಈ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.
ಪೋಲೀಸರು ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ.
Click this button or press Ctrl+G to toggle between Kannada and English