ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ: ನಾರಾಯಣ ಭಂಡಾರಿ

4:51 PM, Tuesday, August 16th, 2016
Share
1 Star2 Stars3 Stars4 Stars5 Stars
(No Ratings Yet)
Loading...

Indipendent-dayಬಂಟ್ವಾಳ: ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ ಅದರ ಕೊರತೆ ಎದ್ದು ಕಾಣುತ್ತಿದೆ, ಯಾವುದೇ ಪಠ್ಯಪುಸ್ತಕಗಳಲ್ಲಿ ಕೂಡಾ ಈ ವ್ಯವಸ್ಥೆ ಇಲ್ಲದೆ ಇರುವುದು ನಮ್ಮ ದುರಂತ ಎಂದು ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ನಾರಾಯಣ ಭಂಡಾರಿ ಹೇಳಿದರು.

ಅವರು ವಿವಿಧ ಸಮಿತಿಗಳ ಆಶ್ರಯದಲ್ಲಿ ಬಿಸಿರೋಡಿನ ಕಂದಾಯ ಇಲಾಖೆಯ ಅವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.

ದೇಶಾಭಿಮಾನವನ್ನು ಮೂಡಿಸುವ ಕೆಲಸ ಮಾಡದ ಹಿನ್ನಲೆಯಲ್ಲಿ ದೇಶಭಕ್ತಿಯ ಕೊರತೆಯಿಂದ ದೇಶ ದ್ರೋಹದ ಕೆಲಸ ಆಗುತ್ತಿದೆ ಎನ್ನುವುದಕ್ಕೆ ಖೇಧವಾಗುತ್ತಿದೆ ಎಂದರು.

ಇದಕ್ಕೆ ಕಾರಣ ನಮ್ಮ ಹಿರಿಯರು, ದೇಶಾಭಿಮಾನವನ್ನು ಬೆಳೆಸುವ ತಿಳಿವಳಿಕೆ, ವಿದ್ಯಾರ್ಜನೆ ಕೊಟ್ಟಿಲ್ಲ ಎನ್ನುವುದನ್ನು ರಾಜರೋಷವಾಗಿ ಹೇಳುವುದಕ್ಕೆ ನಾನು ಹೆದರುವುದಿಲ್ಲ ಎಂದರು.

ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದಾವರ, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಮಾಜಿ ಪುರಸಭೆ ಅಧ್ಯಕ್ಷೆ ವಸಂತಿಚಂದಪ್ಪ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ,ಕಾರ್ಯನಿರ್ವಾಹನಾಧಿಕಾರಿ ಸಿಪ್ರಿಂಯಾನ್ ಮಿರಾಂದ, ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English