ಪತ್ನಿಯ ಕೊಲೆ; ಪತಿ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ

11:49 AM, Wednesday, August 17th, 2016
Share
1 Star2 Stars3 Stars4 Stars5 Stars
(No Ratings Yet)
Loading...

Vittla Murderಮಂಗಳೂರು:  ವಿಟ್ಲದ ಅಪ್ಪೆರಿಪಾದೆ ಎಂಬಲ್ಲಿ ಐದೂವರೆ ವರ್ಷಗಳ ಹಿಂದೆ ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಗಂಡ ರವೀಶ್ (43) ಹಾಗೂ ಅತ್ತೆ ಪಾರ್ವತಿ (60)ಯ ಅಪರಾಧ ಸಾಬೀತಾಗಿದ್ದು, ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.

ರವೀಶ್ ಪತ್ನಿ 2011ರ ಫೆಬ್ರವರಿ 18ರಂದು ತಮ್ಮ ಮನೆಯಲ್ಲೇ ಕೊಲೆಯಾಗಿದ್ದರು. ಇದನ್ನು ಕಣ್ಣಾರೆ ಕಂಡ ಮಗ ಲೋಹಿತಾಶ್ವ (ಆಗ ಅವನಿಗೆ ನಾಲ್ಕು ವರ್ಷ) ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದ. ಘಟನೆಗೆ ಸಂಬಂಧಿಸಿದಂತೆ ಒಟ್ಟು 23 ಮಂದಿ ಸಾಕ್ಷಿ ಹೇಳಿದ್ದಾರೆ. ಇಬ್ಬರು ಪ್ರತಿಕೂಲ ಸಾಕ್ಷಿ ಹೇಳಿದರು. ಎಲ್ಲಾ ಸಾಕ್ಷಿಗಳಿಗಿಂತ ಮಗನ ಸಾಕ್ಷಿ ಪ್ರಮುಖವಾಗಿದ್ದರಿಂದ ರವೀಶ್ ಹಾಗೂ ಪಾರ್ವತಿ ಕೊಲೆಗಾರರು ಎಂಬುದನ್ನು ತೀರ್ಮಾನಿಸಲಾಗಿದೆ ಎಂದು ನ್ಯಾಯಾಧೀಶರಾದ ಸಿ.ಎಂ. ಜೋಶಿ ಪ್ರಕಟಿಸಿದ್ದಾರೆ.

ಇಬ್ಬರು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ತಲಾ ಮೂರು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ಮಗ ಲೋಹಿತಾಶ್ವ ಸರಸ್ವತಿಯವರ ತಂದೆ ಪೂವಪ್ಪ ನಾಯ್ಕ್ ಅವರ ಬಳಿ ಇದ್ದು, ಆತನಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಪುಷ್ಪರಾಜ್ ಹಾಗೂ ರಾಜು ಪೂಜಾರಿ ವಾದಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English