ಮಂಗಳೂರು: ರಾಜ್ಯದ ವಿವಿಧ ರಸ್ತೆಗಳಲ್ಲಿ ಓಡಾಡಲಿರುವ 637 ಬಸ್‌ಗಳನ್ನು ಆ. 18ರಂದು ಸಿಎಂ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದ್ದು, ಈ ನರ್ಮ್ ಹೊಸ ಬಸ್‌ಗಳು ಕರಾವಳಿಯಲ್ಲೂ ಓಡಾಡಲಿವೆ. ಪ್ರಥಮ ಹಂತದಲ್ಲಿ ಮಂಗಳೂರಿಗೆ 20 ಹಾಗೂ ಉಡುಪಿಗೆ 28 ನವೀನ ಮಾದರಿಯ ಮಿನಿ ಬಸ್‌ಗಳು ದೊರೆಯಲಿವೆ. ಪುತ್ತೂರು ವಿಭಾಗದ ಪುತ್ತೂರಿಗೆ 28 ಹಾಗೂ ಮಡಿಕೇರಿಗೆ 18 ಡಲ್ಟ್ ಬಸ್‌ಗಳು ಮಂಜೂರಾಗಿವೆ.
ಮಂಗಳೂರಿಗೆ 20 ಹಾಗೂ ಉಡುಪಿಗೆ 28 ಬಸ್‌ಗಳು ಮಂಜೂರಾಗಿವೆ. ಈಗಾಗಲೇ ಕೆಲವು ನರ್ಮ್ ಬಸ್‌ಗಳು ರಸ್ತೆಗಿಳಿದಿವೆ. ಹೊಸ ಗಾಡಿಗಳು ಬರುತ್ತಿದ್ದಂತೆಯೇ ಹಳೆಗಾಡಿಗಳನ್ನು ರಸ್ತೆಗಿಳಿಸದಿರಲು ಚಿಂತನೆ ಮಾಡಲಾಗುತ್ತಿದೆ ಎಂದು ಕೆಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ತಿಳಿಸಿದರು.
ನೂತನ ಅತ್ಯಾಧುನಿಕ ನರ್ಮ್ ಬಸ್ಸುಗಳು ಸುಧಾರಿತ ಎಂಜಿನ್, ಉದ್ದ ಕಿಟಕಿ, ತುರ್ತು ನಿರ್ಗಮನ ವ್ಯವಸ್ಥೆ, ಅಗ್ನಿ ನಿರೋಧಕ ಉಪಕರಣ ಮತ್ತಿತರ ಸೌಲಭ್ಯ ಹೊಂದಿರುತ್ತವೆ. ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಸನ್ ಹೊಂದಿದ ಈ ಬಸ್‌ನಲ್ಲಿ 70 ಮಿಲಿ ಮೀಟರ್ ಗ್ಯಾಂಗ್‌ವೇ ಇದೆ. ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸ್ಥಳಾವಕಾಶ ಇರುವುದರಿಂದ ಇದು ಪ್ರಯಾಣಿಕ ಸ್ನೇಹಿ ಆಗಲಿದೆ. ಭಾರತ ಸರಕಾರ ನಿಗದಿಪಡಿಸಿರುವ ಅರ್ಬನ್ ಬಸ್ ಸ್ಪೆಸಿಫಿಕೇಶನ್-2ಗೆ ಅನುಗುಣವಾಗಿ ಏರ್ ಸಸ್ಪೆನ್ಷನ್, ಮಲ್ಟಿಪ್ಲೆಕ್ಸ್ ವೈರಿಂಗ್‌ನಂಥ ಸೌಲಭ್ಯವನ್ನೂ ಹೊಂದಿದೆ. ಅಧಿಕ ಸಾಮರ್ಥ್ಯದ ಆಕ್ಸಿಲರೇಟರ್, ವೇಗದ ಚಲನೆಗೆ ಅನುಕೂಲ ಮಾಡಿಕೊಡಲಿದೆ.
ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ, ಪಬ್ಲಿಕ್ ಇನ್‌ಫರ್ಮೇಷನ್ ಸಿಸ್ಟಂ, ಅಟೋಮೆಟಿಕ್ ವೆಹಿಕಲ್ ಲೊಕೇಶನ್ ಸಿಸ್ಟಂ, ಸೆಕ್ಯುರಿಟಿ ನೆಟ್‌ವಕ್ ಸಿಸ್ಟಂ, ವೆಹಿಕಲ್ ಹೆಲ್ತ್ ಮಾನಿಟರಿಂಗ್ ಅಂಡ್ ಡಯಾಗ್ನಾಸ್ಟಿಕ್ ಸಿಸ್ಟಂ ಈ ನೂತನ ಬಸ್ಸಿನ ವೈಶಿಷ್ಟ್ಯಗಳಾಗಿವೆ. ಕಂಟ್ರೋಲ್ ರೂಂನಲ್ಲಿ ಕುಳಿತು ಬಸ್ಸುಗಳ ಸಂಚಾರದ ಮೇಲೆ ಕಣ್ಗಾವಲು ಇಡಲು ಅನುಕೂಲವಾಗುವಂತೆ ಜಿಪಿಎಸ್ ಸಿಸ್ಟಂ ಕೂಡ ಅಳವಡಿಸಲಾಗಿದೆ.
ಚಾಲಕರು ಹೆಚ್ಚು ಆರಾಮದಾಯಕವಾಗಿ ಬಸ್ ಚಲಾಯಿಸಲು ಅನುಕೂಲವಾಗುವಂತೆ ಸೀಟು ವಿನ್ಯಾಸಗೊಳಿಸಲಾಗಿದ್ದು, ನಾಲ್ಕು ಹಂತದಲ್ಲಿ ಈ ಆಸನ ಹೊಂದಿಸಿಕೊಳ್ಳಲು ಅವಕಾಶ ಇರುತ್ತದೆ. ಇಂಥ ಬಸ್ಸುಗಳ ಚಾಲನೆಗೆ ಚಾಲಕ ಸಿಬಂದಿಗೆ ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದೆ.
Click this button or press Ctrl+G to toggle between Kannada and English