ವಿದ್ಯಾರ್ಥಿಗಳಲ್ಲಿರುವ ಉತ್ಕೃಷ್ಟ ಚಿಂತನೆಯೇ ದೇಶಕ್ಕೆ ಅತಿ ದೊಡ್ಡ ಕೊಡುಗೆ: ಸುರೇಶ್ ಪ್ರಭು

9:25 AM, Saturday, August 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

Suresh-prabhuಮಂಗಳೂರು: ವಿದ್ಯಾರ್ಥಿಗಳಲ್ಲಿರುವ ಉತ್ಕೃಷ್ಟ ಚಿಂತನೆಯೇ ದೇಶಕ್ಕೆ ಅತಿ ದೊಡ್ಡ ಕೊಡುಗೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.

ಕೊಂಕಣಿ ಮಾನ್ಯತಾ ದಿನಾಚರಣೆ ಹಾಗೂ ವಿಶ್ವ ಕೊಂಕಣಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಅವುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯರು ಬಹುಭಾಷಾ ಪ್ರವೀಣರು. ಇದು ಮಕ್ಕಳ ಸಾಂಸ್ಕೃತಿಕ, ಭಾಷಾ ಕೌಶಲವನ್ನು ಹೆಚ್ಚಿಸಿದೆ ಎಂದರು.

ಕೊಂಕಣಿ ಭಾಷಾ ಹಾಗೂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಪಿ. ದಯಾನಂದ ಪೈ, ರಾಜ್ಯ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಉದ್ಯಮಿ ಎಂ. ಜಗನ್ನಾಥ ಶೆಣೈ, ಗ್ರೇಸ್ ಪಿಂಟೊ, ಪ್ರಕಾಶ್ ಪೈ, ವಿದ್ಯಾರ್ಥಿ ವೇತನ ಯೋಜನೆಯ ರೂವಾರಿ ಟಿ.ವಿ. ಮೋಹನ್ ದಾಸ್ ಪೈ, ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷ ರಾಮದಾಸ್ ಕಾಮತ್, ಕಾರ್ಯದರ್ಶಿ ಪ್ರದೀಪ್ ಪೈ, ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ಉಪಸ್ಥಿತರಿದ್ದರು.

Suresh-prabhu

Suresh-prabhu2

Suresh-prabhu3

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English