ರಿಯೋ ಡಿ ಜನೈರೋ: ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅಂತಿಮವಾಗಿ ಬೆಳ್ಳಿಯೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ಸ್ಪೇನಿನ ಕರೋಲಿನಾ ಮರೀನ್ ವಿರುದ್ಧ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಸಿಂಧು ವಿರೋಚಿತ ಸೋಲು ಕಂಡಿದ್ದಾರೆ.
ಮೊದಲ ಸೆಟ್ ಗೆದ್ದ ಸಿಂಧು ಕೋಟ್ಯಂತರ ಜನರ ಆಸೆಯನ್ನು ನೆರವೇರಿಸುವ ತವಕದಲ್ಲಿದ್ದರು. ಆದರೆ ನಂತರ ತಿರುಗಿ ಬಿದ್ದ ಸ್ಪೇನಿನ ಎಡಗೈ ಆಟಗಾರ್ತಿ ಕರೋಲಿನಾ ಮರೀನ್ ಕೊನೆಯ ಎರಡು ಸೆಟ್ ಗಳನ್ನು ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು.
ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಜಯ ಕಂಡಿದ್ದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ಅವರು ಪೈಪೋಟಿ ನೀಡಲು ಆರಂಭಿಸುವ ಮುನ್ನವೇ ಕರೋಲಿನಾ ವಿಜಯದ ಪಥ ದಾಟಿದ್ದರು.
ಕ್ವಾರ್ಟರ್ ಫೈನಲಿನಲ್ಲಿ ಭಾರತದ ಸಿಂಧುಗೆ ಎದುರಾಗಿದ್ದು ವಿಶ್ವದ 2ನೇ ಶ್ರೇಯಾಂಕಿತೆ ಚೀನಾದ ವಾಂಗ್ ಯಿಹಾನ್. ಅಲ್ಲಿ ಗೆಲುವನ್ನು ದಾಖಲಿಸಿಕೊಂಡು ಸೆಮಿಫೈನಲ್ ನಲ್ಲಿ ಜಪಾನ್ ನ ನೋಜೋಮಿ ಒಕುಹಾರ ಅವರನ್ನು ಸೋಲಿಸಿ ಪದಕ ಪಕ್ಕಾ ಮಾಡಿಕೊಂಡಿದ್ದರು. ಫೂನಲಲ್ಲಿ ವಿರೋಚಿತ ಆಟ ನೀಡಿ ಬೆಳ್ಳಿಗೆ ಕೊರಳು ಒಡ್ಡುವುದರೊಂದಿಗೆ ಕೋಟ್ಯಂತರ ಭಾರತೀಯರ ಮನ ಗೆದ್ದರು.
Click this button or press Ctrl+G to toggle between Kannada and English