ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದೆ: ಅಮಿತ್ ಷಾ

2:42 PM, Monday, August 22nd, 2016
Share
1 Star2 Stars3 Stars4 Stars5 Stars
(No Ratings Yet)
Loading...

Amith-shaಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶವನ್ನು ವಿಭಜಿಸಲು ಕೆಲ ಗುಂಪುಗಳು ಷಡ್ಯಂತ್ರ ನಡೆಸುತ್ತಿದ್ದು, ಇಂತಹವರನ್ನು ಪ್ರತ್ಯೇಕಿಸಿ ದೇಶದ ಐಕ್ಯತೆ ಮೆರೆಯುವ ಕಾರ್ಯವಾಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಭಾರತ ತಿರಂಗ ಯಾತ್ರೆ ಹಾಗೂ ಸ್ವಾತಂತ್ರ್ಯ 70ರ ಬಲಿದಾನದ ಕಾರ್ಯಕ್ರಮದಂಗವಾಗಿ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ರಾಷ್ಟ್ರ ವಿಭಜನೆಯಂತಹ ಭಾಷಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ನೀಡಲಾಗುತ್ತಿದ್ದು, ದೇಶದ ಅನೇಕ ಕಡೆ ಇಂತಹ ಘಟನೆಗಳು ನಡೆಯುತ್ತಿದ್ದು, ದೇಶ ಭಕ್ತಿಯ ಮೂಲಕ ಇದಕ್ಕೆ ತಕ್ಕ ಉತ್ತರ ನೀಡಬೇಕು. ಈ ದಿಸೆಯಲ್ಲಿ ಯುವಜನತೆ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹನೀಯರ ಕುರಿತು ಅಧ್ಯಯನ ಮಾಡಿ ಅವರ ಬಲಿದಾನವನ್ನು ಸ್ಮರಿಸಬೇಕು. ರಾಷ್ಟ್ರಭಕ್ತಿ ಸಮಾಜದ ಅವಿಭಾಜ್ಯ ಅಂಗವಾಗಬೇಕೆಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ರಾಜಕಾರಣದ ಕನ್ನಡಕದಿಂದ ನೋಡುವ ಬದಲು ರಾಷ್ಟ್ರಭಕ್ತಿಯ ಕನ್ನಡಕದಿಂದ ನೋಡಬೇಕು ಎಂದು ಹೇಳುವ ಮೂಲಕ ಮಂಗಳೂರು ವಿವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಿಂದ ಉಂಟಾದ ವಿವಾದಕ್ಕೆ ಚಾಟಿ ಬೀಸಿದರು.

Amith-shaಅಬ್ಬಕ್ಕ ರಾಣಿಯವರನ್ನು ಸದಾ ಜನತೆ ನೆನಯಬೇಕಾದರೆ ಅವರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಡಬೇಕು. ಅಲ್ಲದೆ, ಅವರ ಕುರಿತು ಪಠ್ಯ ಪುಸ್ತಕಗಳಲ್ಲಿ ಉಲ್ಲೇಖಿಸಬೇಕೆಂದರು.

ಅಬ್ಬಕ್ಕ ರಾಣಿ ಕುಟುಂಬಸ್ಥರಾದ, ಚೌಟ ಮನೆತನದ ಪ್ರತಿನಿಧಿ ಕುಲದೀಪ್ ಚೌಟ ಅವರನ್ನು ಅಮಿತ್ ಶಾ ಸನ್ಮಾನಿಸಿದರು.

ವೇದಿಕೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮುರಳೀಧರ ರಾವ್, ನಿಟ್ಟೆ ಶಿಕ್ಷಣ ಸಂಸ್ಥೆಯ ಕುಲಪತಿ ಡಾ. ವಿನಯಹೆಗ್ಡೆ ಉಪಸ್ಥಿತರಿದ್ದರು.

Amith-sha

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English