ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಅಂತೆಯೇ ಬದುಕುವುದು ಅತ್ಯಂತ ದೊಡ್ಡ ಸಾರ್ಥ್ಯಕ್ಯ: ರುದ್ರಪ್ಪ ಮಾನಪ್ಪ ಲಮಾಣಿ

9:53 AM, Tuesday, August 23rd, 2016
Share
1 Star2 Stars3 Stars4 Stars5 Stars
(No Ratings Yet)
Loading...

Rudrappaಬದಿಯಡ್ಕ: ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಅಂತೆಯೇ ಬದುಕುವುದು ಅತ್ಯಂತ ದೊಡ್ಡ ಸಾರ್ಥ್ಯಕ್ಯವಾಗಿದ್ದು,ಇಂದಿನ ಕಾಲಘಟ್ಟದಲ್ಲಿ ಮೌಲಿಕ ಜೀವನ ಮರೆಯಾಗುತ್ತಿರುವುದು ಆತಂಕಕಾರಿ.ಈ ಹಿನ್ನೆಲೆಯಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಬದುಕು ಆದರ್ಶಯುತವಾಗಿದ್ದು ಅವರು ಸದಾ ವಿಶ್ವವಂದ್ಯರೆಂದು ಕರ್ನಾಟಕ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ಗಾಂಧೀವಾದಿ,ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಿರ್ಗತಿಕರಿಗೆ ಉಚಿತವಾಗಿ ಕೊಡಮಾಡುವ 240ನೇ ಮನೆಯ ಕೀಲಿಕೈಯನ್ನು ಸುಮತಿ ಮೊಳೆಯಾರರವರಿಗೆ ಹಸ್ತಾಂತರಿಸಿ ಶನಿವಾರ ಸಂಜೆ ಕಿಳಿಂಗಾರಿನಲ್ಲಿ ಅವರು ಮಾತನಾಡುತ್ತಿದ್ದರು.

ಫ್ಯಾಶನೇಟ್ ಆಗಿ ಬದುಕುವುದನನು ಯುವ ಜನತೆ ಇಂದು ಇಷ್ಟಪಡುತ್ತಾರೆ.ಆದರೆ ಆದರ್ಶಗಳು ಫ್ಯಾಶನ್ ಗಳಾದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಸಂಕಷ್ಟದಲ್ಲಿರುವವರಿಗೆ ಧ್ವನಿಯಾಗಿ ಆಶ್ರಯ ಒದಗಿಸುವುದು ಪರಮಾತ್ಮನ ಸೇವೆಗಿಂತಲೂ ಮಿಗಿಲಾದುದೆಂದು ಅವರು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿ ಮಾತನಾಡಿ,ಜಿಲ್ಲೆಯಾದ್ಯಂತ ಇಂದು ಮನೆಮಾತಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ಇತರರೆಲ್ಲರ ಸಾಧನೆಗಿಂತಲೂ ಅಧಿಕ ಮಟ್ಟದ ಸೇವಾ ಕಾರ್ಯಗಳ ಮೂಲಕ ಗಮನ ಸೆಳೆದಿರುವುದು ಜಿಲ್ಲೆಯ ಖ್ಯಾತಿಯನ್ನು ಜಗದಗಲ ಪಸರಿಸಲು ಕಾರಣವಾಗಿದೆ. ಸಾಯಿರಾಂ ಭಟ್ ರವರ ಆದರ್ಶ ಜೀವನ ಮೌಲ್ಯಯುತವಾಗಿದ್ದು ವಿಶ್ವಮಟ್ಟದ ದಾಖಲೀಕರಣ ಈ ಬಗ್ಗೆ ಅಗತ್ಯವೆಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ ಮಾನ್ಯ, ಶೀಲಾ ಕೆ.ಎನ್.ಭಟ್,ವೇಣುಗೋಪಾಲ ಕಿಳಿಂಗಾರು.ಮಧುರಾ ವೇಣುಗೋಪಾಲ, ಶಾಂತಿ, ಸಂದೇಶ್, ಸಹಿತ ಸಾಯಿರಾಂ ಭಟ್ ಕುಟುಂಬದವರು ಉಪಸ್ಥಿತರಿದ್ದರು. ಕೆ.ಎನ್ ಕೃಷ್ಣ ಭಟ್ ಸ್ವಾಗತಿಸಿ,ವೇಣುಗೋಪಾಲ ವಂದಿಸಿದರು.ಎಂ.ಎಚ್ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English