ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೆರ್ಲ ಇದರ ನೇತೃತ್ವದಲ್ಲಿ ಪೆರ್ಲ ಶ್ರೀ
ಸತ್ಯನಾರಾಯಣ ಮಂದಿರದ ವಠಾರದಲ್ಲಿ ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ
ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನಾ ಸಭೆ ಭಾನುವಾರ ನಡೆಯಿತು.
ಶಬರಿಮಲೆ ದೇಶವ್ಯಾಪಿ ಪ್ರಸಿಧ್ಧಿ ಪಡೆದ ಕ್ಷೇತ್ರವಾಗಿದ್ದು ಸರಕಾರದ ಖಜಾನೆಗೆ ಕೋಟಿ ಆದಾಯ ಬರುತ್ತಿದೆ. ಹಾಗಿದ್ದರೂ ಮತ್ತೂ ಬೆಲೆ ಏರಿಕೆ ನಡೆಸಿದ್ದು ರಾಜ್ಯಸರಕಾರದ ನಿಲುವು
ಖಂಡನೀಯ. ಈ ಬಗ್ಗೆ ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತವೃಂದಗಳು ರಾಜಕೀಯ
ಬೇಧ ಮರೆತು ಪ್ರತಿಭಟಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸಭೆಯ
ಅಧ್ಯಕ್ಷತೆಯನ್ನುವಹಿಸಿದ ಸತೀಶ್ ಮೂಡಿತ್ತಾಯ ಅಭಿಪ್ರಾಯಪಟ್ಟರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಭಾಶ್ ಪೆರ್ಲ ಧಾರ್ಮಿಕ ಕ್ಷೇತ್ರಗಳಲ್ಲಿ
ವ್ಯಾಪರೀಕರಣಗೊಳ್ಳುವುದನ್ನು ಮತ್ತು ಧಾರ್ಮಿಕ ಕ್ಷೇತ್ರಗಳ ಮೇಲಿನ ರಾಜ್ಯ ಸರಕಾರದ
ನಿಲುವನ್ನು ಇದುವರೆಗೆ ಯಾವ ರಾಜಕೀಯ ಪಕ್ಷಗಳು , ಹಿಂದೂ ಸಂಘಟನೆಗಳೂ ಪ್ರತಿಭಟಿಸದಿರುವುದು ಖಂಡನೀಯವೆಂದು ತಿಳಿಸಿದದರು. ಕಾರ್ಯಕ್ರಮದಲ್ಲಿ ಹಲವು ಮಂದಿರಗಳ ಗುರುಸ್ವಾಮಿಗಳು ಉಪಸ್ಥಿತರಿದ್ದರು.
ಡ್ರೈವರ್ ಅಶೋಕ ಸ್ವಾಗತಿಸಿ , ಕಿರಣ್ ಮಣಿಯಂಪಾರೆ ವಂದಿಸಿದರು. ಮಣಿರಾಜ್ ಜೋಗಿ ವಾಂತಿಚ್ಚಾಲು ನಿರೂಪಿಸಿದರು.
Click this button or press Ctrl+G to toggle between Kannada and English