ಉಡುಪಿ: ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ರಾಜಾಂಗಣದಲ್ಲಿ ರವಿವಾರ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣಮಠಕ್ಕೆ ಹಿಂದೆ ವೀರಪ್ಪ ಮೊಯಿಲಿ ಆನೆ ನೀಡಿದ್ದರು. ಆನೆ ಸುಭದ್ರೆಯನ್ನು ಅರಣ್ಯ ಇಲಾಖೆಗೆ ಚಿಕಿತ್ಸೆಗೆ ನೀಡಿದ್ದು ತಿಳಿದಿದೆ. ಅಷ್ಟಮಿ ಉತ್ಸವಕ್ಕೆ ಅಧಿಕಾರಿಧಿಗಳಲ್ಲಿ ಮಾತನಾಡಿ ಆನೆ ನೀಡುತ್ತೇನೆ ಎಂದರು.
ಉಭಯ ಜಿಲ್ಲೆಗಳಲ್ಲಿ ಕೃಷ್ಣಾಷ್ಟಮಿ ಉತ್ಸವ, ಮೊಸರುಕುಡಿಕೆ ಸಂಭ್ರಮ ಜರುಗುತ್ತಿದೆ. ನಾನು ಚಿಕ್ಕವನಿದ್ದಾಗ ಅಷ್ಟಮಿ, ಚೌತಿಯ ಮರ್ಯಾದೆಧಿಗೆಂದು ಜನರು ಬರುತ್ತಿದ್ದರು. ಇದು ಮರ್ಯಾದೆಯಲ್ಲ. ಹಸಿವು ಇಂಗಿಸುವ ಕೆಲಸ. ಆಗ ಬಡತನವಿತ್ತು, ಈಗ ಅಂತಹ ಬಡತನವಿಲ್ಲ ಎಂದು ರೈ ಹೇಳಿದರು.
ಸಚಿವ ಪ್ರಮೋದ್ ಮಧ್ವರಾಜ್ ಕೃಷ್ಣಾಷ್ಟಮಿ ಆಚರಣೆ ಮಹತ್ವದ ಕುರಿತು ಮಾತನಾಡಿದರು. ಪರ್ಯಾಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನಧಿತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪ್ರೊ| ಎಂ.ಎಲ್. ಸಾಮಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English