ಮೂಡಬಿದಿರೆ: ರಾಜ್ಯದ 6 ಜಿಲ್ಲೆಗಳ 16 ಮಂದಿ ಈಜು ತರಬೇತುದಾರರಿಗೆ ಆಸ್ಟ್ರೇಲಿಯನ್ ಮಾದರಿಯಲ್ಲಿ ತರಬೇತಿ ನೀಡುವ ವಾರಾವಧಿಯ ಆಸ್ಟ್‌ಸ್ವಿಮ್’ ಕಾರ್ಯಾಗಾರವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ಮೂಡಬಿದಿರೆ ಸ್ವರಾಜ್ಯ ಮೈದಾನದ ಬಳಿಯ ಯುವಸಬಲೀಕರಣ, ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ಮಂಗಳವಾರ ಪ್ರಾರಂಭವಾಯಿತು.
ಕಾರ್ಯಾಗಾರ ಉದ್ಘಾಟಿಸಿದ ಶಾಸಕ, ಮಾಜಿ ಯುವಸಬಲೀಕರಣ, ಕ್ರೀಡಾ ಸಚಿವ ಕೆ. ಅಭಯಚಂದ್ರ ಅವರು, ‘ರಾಜ್ಯಮಟ್ಟದ ಈಜು ತರಬೇತುದಾರರಿಗಾಗಿ ಮೊದಲ ಬಾರಿಗೆ ಏರ್ಪಡಿಸ ಲಾಗಿರುವ ತರಬೇತಿ ಕಾರ್ಯಾಗಾರ ಮೂಡಬಿದಿರೆಯಲ್ಲಿ ನಡೆಯುವಂತಾಗಿರುವುದು ಇನ್ನೂ ಹೋಬಳಿ ಮಟ್ಟದಲ್ಲಿರುವ ಮೂಡಬಿದಿರೆಗೆ ತಮ್ಮ ಅಧಿಕಾರಾವಧಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್‌ನೊಂದಿಗೆ ಸುಸಜ್ಜಿತ ಈಜುಕೊಳವನ್ನು ಒದಗಿಸಿಕೊಡಲು ಸಾಧ್ಯವಾಗಿದ್ದಕ್ಕೆ ಸಾರ್ಥಕವಾಗಿದೆ ಎಂದರು.
ಮುಖ್ಯ ತರಬೇತುದಾರ ಪಾರ್ಥ ವಾರಾಣಸಿ ಮಾತನಾಡಿ, ‘ದೇಶದಲ್ಲಿ ಮಲೇರಿಯಾದಲ್ಲಿ ಸಾವಿಗೀಡಾಗುವವರಿಗಿಂತ ನೀರಲ್ಲಿ ಮುಳುಗಿ ಸಾಯುವವರೇ ಹೆಚ್ಚು ಎಂಬುದನ್ನು ಗಮನಿಸಿದರೆ, ಈ ದೇಶದಲ್ಲಿ ಪ್ರತಿಯೊಬ್ಬರೂ ಈಜು ಬಲ್ಲವರಾಗಿರಬೇಕು, ಪ್ರತೀ ಶಾಲೆಗಳಲ್ಲಿ ಈಜು ತರಬೇತಿ ಕಡ್ಡಾಯಗೊಳಿಸಬೇಕು ಎಂಬುದಕ್ಕೆ ಒತ್ತು ಸಿಗುತ್ತದೆ’ ಎಂದರು.
‘ನಮ್ಮ ದೇಶದಲ್ಲಿ ಎಲ್ಲದಕ್ಕೂ ಸಿಲೆಬಸ್ ಇದೆ; ಈಜಿಗಿಲ್ಲ ಎಂಬಂಥ ಸ್ಥಿತಿ ಇದೆ. ಆದರೆ ವಿಶ್ವಮಟ್ಟದ ಈಜು ತರಬೇತುದಾರರನ್ನು ನೀಡುತ್ತಿರುವ ಆಸ್ಟ್ರೇಲಿಯಾದಲ್ಲಿ ವಿಶೇಷ ಸಿಲೆಬಸ್ ತಯಾರಿಸಲಾಗಿದ್ದು ಇಲ್ಲಿ ನಡೆಯುವ ತರಬೇತಿಯಲ್ಲಿ ಅಲ್ಲಿನ ಪರೀಕ್ಷಾ ಮಂಡಳಿ ಮೂಲಕ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಜತೆಗೆ ಈಜು ತರಬೇತಿ ನಡೆಯುತ್ತದೆ. ಇದೇ ಆಸ್ಟ್‌ಸ್ವಿಮ್ ಕಾರ್ಯಾಗಾರ’ ಎಂದು ಪಾರ್ಥ ವಾರಾಣಸಿ ವಿವರಿಸಿದರು.
ಮುಖ್ಯ ಅತಿಥಿ, ಸಿಂಥೆಟಿಕ್ ಟ್ರ್ಯಾಕ್-ಸ್ವಿಮ್ಮಿಂಗ್ ಪೂಲ್ ಸಮಿತಿ ಸದಸ್ಯ, ಕೌನ್ಸಿಲರ್ ಪಿ.ಕೆ. ಥಾಮಸ್ ಅವರು, ‘ಮೂಡಬಿದಿರೆ ಅಗ್ನಿಶಾಮಕ ದಳದಲ್ಲಿ ಈಜು ಬಲ್ಲ ಸಿಬಂದಿ ಇಲ್ಲ; ಹಾಗಾಗಿ ಅಗತ್ಯಬಿದ್ದಾಗ ಬಹಳ ತೊಂದರೆ ಆಗುತ್ತಿದೆ’ ಎಂದು ಪ್ರಸ್ತಾವಿಸಿದಾಗ, ತತ್‌ಕ್ಷಣ ಸ್ಪಂದಿಸಿದ ಪಾರ್ಥ ವಾರಾಣಸಿ ಅವರು ಅಗ್ನಿ ಶಾಮಕ ದಳದ ಸಿಬಂದಿಗೂ ತರಬೇತಿ ನೀಡೋಣ ಎಂದು ಅಭಯಚಂದ್ರ ಅವರ ಮೂಲಕ ಪ್ರಕಟಿಸಿದರು. ಮೂಡಬಿದಿರೆಯ ಈಜುಕೊಳದಲ್ಲಿ ಅತ್ಯಾಧುನಿಕವಾಗಿ ನೀರನ್ನು ಶುಚಿಗೊಳಿಸುವ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಪಿ.ಕೆ. ಥಾಮಸ್ ಅವರು ಹೇಳಿದರು. ಇಲಾಖೆಯ ಸ್ಥಳೀಯ ಮೇಲ್ವಿಚಾರಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರ ಮಟ್ಟದ ಈಜಿನಲ್ಲಿ ರಜತ ಪದಕ ವಿಜೇತ, ಈಜು ತರಬೇತುದಾರ ಸನ್ಮಿತ್ರ ವಂದಿಸಿದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಆಳ್ವಾಸ್‌ನ ವಿದ್ಯಾರ್ಥಿ ಧಾರುಣ್ ಭಾಗವಹಿಸುವ ಅವಕಾಶ ಲಭಿಸಿರುವುದು ಮೂಡಬಿದಿರೆಯ ಸಿಂಥೆಟಿಕ್ ಟ್ರ್ಯಾಕ್‌ನ ಗುಣಮಟ್ಟಕ್ಕೆ ಸಂದ ಸರ್ಟಿಫಿಕೇಟ್’ ಎಂದು ಅಭಯಚಂದ್ರ ಅವರು ಉದ್ಗರಿಸಿದರು. ಇಲ್ಲಿಂದ ವಿಶ್ವಮಟ್ಟಕ್ಕೆ ಏರುವಂತಾಗುವ ಎಕ್ಸಲೆನ್ಸಿ ಪಡೆದುಕೊಳ್ಳಿ ಎಂದು ತರಬೇತುದಾರ ರಿಗೆ ಕರೆ ನೀಡಿದರು. ಕಾರ್ಕಳದ ಈಜುಕೊಳ ನಿರ್ಮಾಣಕ್ಕೆ ಎರಡು ಕಂತುಗಳಲ್ಲಿ ಒಟ್ಟು 45 ಲಕ್ಷ ರೂ.ಗಳನ್ನು, ಮಂಗಳೂರಿನ ಈಜು ಕೊಳಕ್ಕಾಗಿ 5.5 ಕೋಟಿ ರೂ. ಒದಗಿಸಲಾಗಿದೆ. ಅಧಿಕಾರ ಇಲ್ಲದಿದ್ದರೂ ಕ್ರೀಡಾ ಪ್ರೇಮ, ಬದ್ಧತೆಯಿಂದ ಶಾಸಕ ಕ್ಷೇತ್ರದ ವ್ಯಾಪ್ತಿಯಾಚೆಗೂ ಕ್ರೀಡಾ ಚಟುವಟಿಕೆಗಳ ಬಗ್ಗೆ ತಾವು ಆಸಕ್ತಿಯಿಂದ ತೊಡಗಿಸಿ ಕೊಳ್ಳುವುದಾಗಿ ತಿಳಿಸಿದ ಅವರು ಮಂಗಳೂರಿನ ಕ್ರೀಡಾ ಹಾಸ್ಟೆಲ್‌ನ ಅಭಿವೃದ್ಧಿಯ ಕುರಿತೂ ತಾವು ಗಮನಿಸುತ್ತಿರುವುದಾಗಿ ಹೇಳಿದರು.
Click this button or press Ctrl+G to toggle between Kannada and English