ಮಂಗಳೂರು : ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರಿಂದ ಬ್ರಷ್ಟ ಅಧಿಕಾರಿಗಳ ಮನೆಗೆ ಏಕ ಕಾಲದಲ್ಲಿ ದಾಳಿ ನಡೆಯಿತು. ದ.ಕ. ದಲ್ಲಿ ಬೆಳ್ತಂಗಡಿ ಆರ್‌ಎಫ್‌ಒ (ಪ್ರಾದೇಶಿಕ ಅರಣ್ಯ ಅಧಿಕಾರಿ)ಮನೆ ಹಾಗೂ ಕಚೇರಿಗೆ, ಆರ್‌ಎಫ್‌ಒ ರಾಘವ ಪಾಟಾಳಿ ಅವರ ಕೊಂಚಾಡಿಯಲ್ಲಿರುವ ಮನೆ ಹಾಗೂ ಬೆಳ್ತಂಗಡಿಯ ಕ್ವಾಟರ್ಸ್ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳ್ತಂಗಡಿ ಕ್ವಾಟರ್ಸ್‌ನಲ್ಲಿ 20ಸಾವಿರ ರೂ.ನಗದು, 40ಪವನ್ ಚಿನ್ನಾಭರಣ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಕೆಲ ದಾಖಲೆ ಹಾಗೂ ಅಲ್ಟೋ ಕಾರೊಂದು ಪತ್ತೆಯಾಗಿದೆ ಎನ್ನಲಾಗಿದೆ
ಮಂಗಳೂರಿನ ಕೊಂಚಾಡಿಯಲ್ಲಿರುವ ಮನೆಯಲ್ಲಿ ಬ್ಯಾಂಕ್ ದಾಖಲೆ ಹಾಗೂ ಇನ್ನಿತರ ದಾಖಲೆಗಳು ಪತ್ತೆಯಾಗಿದ್ದು, ಇವುಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದು. ದಾಳಿಯಲ್ಲಿ ಪತ್ತೆಯಾದ ಆಸ್ತಿಯ ನಿಖರ ವೌಲ್ಯ ಇನ್ನಷ್ಟೇ ಲಭ್ಯವಾಗಬೇಕಿದೆ. ಲೋಕಾಯುಕ್ತ ಎಸ್‌ಪಿ ಜಗದೇಕಮಯ್ಯನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.
Click this button or press Ctrl+G to toggle between Kannada and English