ಎತ್ತಿನಹೊಳೆ ಯೋಜನೆ ಕುರಿತು ಸರಕಾರಕ್ಕೆ ತಜ್ಞರಿಂದ ಮಾಹಿತಿ ನೀಡಿ ಗೊಂದಲ ನಿವಾರಿಸಲಿ: ವೀರೇಂದ್ರ ಹೆಗ್ಗಡೆ

10:44 AM, Monday, August 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

Heggadeಬೆಳ್ತಂಗಡಿ: ಎತ್ತಿನಹೊಳೆ ಯೋಜನೆ ಕುರಿತು ದ.ಕ. ಜನರಲ್ಲಿ ಸಾಕಷ್ಟು ತಾಂತ್ರಿಕ ಗೊಂದಲಗಳಿದ್ದು, ಸರಕಾರ ಇವುಗಳ ಕುರಿತು ತಜ್ಞರಿಂದ ಮಾಹಿತಿ ಕೊಡಿಸಬೇಕಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ, ಮನವಿ ಮಾಡಿದ್ದರೂ ಸರಕಾರ ಸ್ಪಂದಿಸಲಿಲ್ಲ. ಇನ್ನಾದರೂ ಮಾಹಿತಿ ನೀಡಿ ಗೊಂದಲ ನಿವಾರಿಸಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ರವಿವಾರ ಶ್ರೀ ಕ್ಷೇತ್ರದಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಜಿಲ್ಲಾ ನಿಯೋಗ ತಮ್ಮನ್ನು ಭೇಟಿ ಮಾಡಿದಾಗ ಮಾತನಾಡಿದರು.

ಮಾಹಿತಿ ನೀಡಿ ಗೊಂದಲ ನಿವಾರಿಸಿ ಒಂದೇ ರಾಜ್ಯದ ಮಂದಿ ಎಂದಾಗ ಅಣ್ಣ ತಮ್ಮಂದಿರಿದ್ದಂತೆ. ನಮ್ಮೊಳಗೆ ಕಲಹ ಅಲ್ಲ. ಆದರೆ ದ.ಕ.ದಲ್ಲಿ ಸಾಕಷ್ಟು ಮಳೆಯಾಗಿಲ್ಲ. ನದಿಗಳು ತುಂಬಿ ಹರಿದಿಲ್ಲ. ಹಾಗಿರುವಾಗ ನೀರು ಕೊಡುವುದು ಹೇಗೆ ಸಾಧ್ಯ. ಈಗಾಗಲೇ ಕೋಟ್ಯಂತರ ರೂ. ಕೆಲಸ ಮಾಡಿದ್ದು, ಕಾಮಗಾರಿ ನಡೆಯುತ್ತಲೇ ಇದೆ. ನಾವು ಇಷ್ಟು ವರ್ಷಗಳಿಂದ ಸರಕಾರದ ಜತೆ ಮಾಹಿತಿ ನೀಡಿ, ದ.ಕ. ಜನತೆಯ ಗೊಂದಲ ನಿವಾರಿಸಿ ಎಂದು ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ ಎಂದರು.

ನಮಗೂ ನೀರಿಲ್ಲ. ಅವರಿಗೂ ನೀರಿಲ್ಲ ಎಂದಾಗ ಬಾರದು. ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಭಾಗದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರಿಗೂ ನೀರಿನ ತೀವ್ರ ಅಗತ್ಯವಿದೆ. ಅವರ ಬೇಡಿಕೆ ತಪ್ಪಲ್ಲ. ಹಾಗಂತ ಯಾರಿಗೂ ನೀರಿಲ್ಲದಂತೆ ಮಾಡುವುದೂ ಸರಿಯಲ್ಲ. ದ.ಕ.ದಲ್ಲಿ ನೀರು ಕೃಷಿಗೆ ಮೊದಲ ಆದ್ಯತೆ ಎಂದು ಇದ್ದುದು ಈಗ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಾದ ಸ್ಥಿತಿಗೆ ಬಂದೊದಗಿದೆ.

ಕಿಂಡಿಅಣೆಕಟ್ಟುಗಳ ರಚನೆ, ಮಳೆ ನೀರ ಸಂಗ್ರಹದ ಮೂಲಕ ಬತ್ತಿರುವ ಅಂತರ್ಜಲದ ಕೊರತೆ ನೀಗಿಸುವ ಕಾರ್ಯ ಕೂಡ ನಡೆಯಬೇಕಿದೆ. ಸಚಿವರು, ಸಂಸದರು ಎಲ್ಲರೂ ನಮ್ಮವರೇ ಆದ ಕಾರಣ ಸರಕಾರಕ್ಕೆ ನಮ್ಮ ಧ್ವನಿ ಮುಟ್ಟಿಸುವ ಕಾರ್ಯ ನಡೆಯಬಹುದು ಎಂದರು.

ಧರ್ಮಸ್ಥಳ ಯೋಜನೆ ವತಿಯಿಂದ ಕೆರೆಗಳ ಹೂಳೆತ್ತಿ ಜಲಮರುಪೂರಣ ಮಾಡುವ ಕಾರ್ಯ ನಡೆಸಲಾ ಗುತ್ತಿದೆ. ಕೆರೆಗಳಿಗೆ ಒಳಹರಿವು ಇಲ್ಲದ ಕಾರಣ ಅನೇಕ ಕಡೆ ಕೆರೆಗಳು ಬತ್ತಿವೆ. ಕೆರೆಗಳ ಒತ್ತುವರಿ ಮಾತ್ರವಲ್ಲ ಕೆರೆಗಳ ಕಾಲುವೆ ಒತ್ತುವರಿಯಿಂದ ಕೂಡ ಸಮಸ್ಯೆಯಾಗಿದೆ ಎಂದರು.

ಮಾಜಿ ಶಾಸಕ, ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥ, ಸು.ಕೋರ್ಟ್‌ನಲ್ಲಿ ದಾವೆ ಹೂಡಿದ ವಿಜಯ್‌ ಕುಮಾರ್‌ ಶೆಟ್ಟಿ ಸುಪ್ರೀಂ ಕೋರ್ಟ್‌ನ ಹಸಿರು ಪೀಠದಲ್ಲಿ ಪ್ರಸ್ತುತ ದಾವೆ ಇರುವ ಹಂತವನ್ನು ವಿವರಿಸಿ ಸೆ. 21ರಂದು ವಿಚಾರಣೆ ನಡೆಯಲಿದೆ ಎಂದರು.

ಉಪಮೇಯರ್‌ ಪುರುಷೋತ್ತಮ್‌ ಚಿತ್ರಾಪುರ, ಸಮಿತಿಯ ವಿವಿಧ ಪದಾಧಿಕಾರಿಗಳಾದ ಶಶಿರಾಜ್‌ ಶೆಟ್ಟಿ ಕೊಳಂಬೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಆನಂದ ಶೆಟ್ಟಿ ಅಡ್ಯಾರ್‌, ರಮಾನಂದ ಶೆಟ್ಟಿ, ಹರೀಶ್‌ ಶೆಟ್ಟಿ ಬೊಕ್ಕಪಟ್ಣ, ಮಂಜು ಪ್ರಸಾದ್‌, ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ಜಯರಾಮ ಭಂಡಾರಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English