ದೇಶದ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ:ಪ್ರಮೋದ್‌ ಮಧ್ವರಾಜ್‌

10:59 AM, Monday, August 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

Madwarajಮಲ್ಪೆ: ದೇಶದ 128 ಕೋಟಿ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಲ್ಪೆಯ ಸಮರ್ಪಣಾ ತಂಡದ ಯುವಕರು ಇಂತಹ ಸಂದೇಶವನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಮಾಡಿದ್ದಾರೆ. ಇದು ದೇಶದ ಎಲ್ಲ ಕಡೆಗೂ ವಿಸ್ತಾರಗೊಳ್ಳಬೇಕು ಎಂದು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ನಡೆದ ಮಲ್ಪೆಯ ದೇಶಭಕ್ತ ಯುವಕರು ಹುಲಿವೇಷ ಹಾಕಿ ಸಂಗ್ರಹಿಸಿದ ಧನವನ್ನು ವೀರ ಯೋಧರಿಗೆ ಗೌರವ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮದಲ್ಲಿ ಯೋಧರನ್ನು ಸಮ್ಮಾನಿಸಿ ಮಾತನಾಡಿದರು.

ಎಲ್ಲ ಯೋಧರು ನಿವೃತ್ತರಾಗಿ ಮನೆಗೆ ಬರುವುದಿಲ್ಲ. ಎಷ್ಟೋ ಯೋಧರು ಸಾವನ್ನಪ್ಪುತ್ತಾರೆ, ತಮ್ಮ ಅಂಗಾಂಗಗಳನ್ನು ಕಳಕೊಳ್ಳುತ್ತಾರೆ. ಆನೇಕ ಕಷ್ಟನಷ್ಟಗಳನ್ನು ಅನುಭವಿಸುತ್ತಾರೆ.

ಯೋಧರಿಗೆ ಕೇವಲ ಯುದ್ಧ ಸಮಯದಲ್ಲಿ ಮಾತ್ರ ಕೆಲಸ ಅಲ್ಲ. ಇವತ್ತು ಜಮ್ಮು-ಕಾಶ್ಮೀರದಲ್ಲಿ ಉಂಟಾಗಿರುವ ಪರಿಸ್ಥಿತಿಯಲ್ಲಾಗಲಿ, ಉತ್ತರ ಭಾರತದಲ್ಲಿ ನಕ್ಸಲೈಟ್‌, ಭಯೋತ್ಪಾದಕರ ದಾಳಿ ಮೊದಲಾದ ಪ್ರತಿಕೂಲ ಪರಿಸ್ಥಿತಿಯಲ್ಲೂ ಯೋಧರು ತಮ್ಮ ಜೀವದ ಹಂಗನ್ನು ತೊರೆದು ದೇಶದ ರಕ್ಷಣೆಗಾಗಿ ಪ್ರಾಣ, ಅಂಗಾಂಗಗಳನ್ನು ಕಳಕೊಳ್ಳುವ ಪರಿಸ್ಥಿತಿ ಇದೆ. ಅಂಥವರಿಗೆ ಸರಕಾರ ಪ್ರಶಸ್ತಿ, ಪರಿಹಾರವನ್ನು ನೀಡಬಹುದು. ಆದರೆ ಅಂಥವರನ್ನು ಸದಾ ಸ್ಮರಿಸುವಂತಹ ಜವಾಬ್ದಾರಿ ಮಾತ್ರ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಮಲ್ಪೆಯ ನಿವೃತ್ತ ಯೋಧ ಎಂ.ಕೆ. ಕುಮಾರ್‌ ತೊಟ್ಟಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಕಾರ ಭಾರತಿಯ ಆದರ್ಶ ಗೋಖಲೆ ಅವರು ದಿಕ್ಸೂಚಿ ಭಾಷಣ ಮಾಡಿದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ನ್ಯಾಯವಾದಿ ಸುಪ್ರಸಾದ್‌ ಶೆಟ್ಟಿ, ಆರಕ್ಷಕ ಠಾಣೆಯ ಉಪನಿರೀಕ್ಷಕ ರವಿ ಕುಮಾರ್‌, ಉದ್ಯಮಿಗಳಾದ ಆನಂದ್‌ ಸಿ. ಕುಂದರ್‌, ಸಾಧು ಸಾಲ್ಯಾನ್‌, ಹರಿಯಪ್ಪ ಕೋಟ್ಯಾನ್‌, ಇಬ್ರಾಹಿಂ, ಸುಧಾಕರ್‌ ಎ. ಕುಂದರ್‌, ಸದಾನಂದ ಸಾಲ್ಯಾನ್‌, ಯಶೋಧರ್‌ ಅಮೀನ್‌, ನಾಗರಾಜ ಸುವರ್ಣ, ದಯಾನಂದ ಕುಂದರ್‌, ಮುಸ್ತಾಕ್‌, ಫಯಾಝ್ ಉಪಸ್ಥಿತರಿದ್ದರು.

ನಿವೃತ್ತ ಯೋಧ ಎಂ.ಕೆ. ಕುಮಾರ್‌ ತೊಟ್ಟಂ,ಸಮಾಜ ಸೇವಕ ರವಿ ಕಟಪಾಡಿ, ಭಿನ್ನಸಾಮರ್ಥ್ಯದವರ ಸ್ಪಂದನ ಶಾಲೆ, ಆಶಾ ನಿಲಯ ಶಾಲೆ ಮತ್ತು ಪೊಲೀಸ್‌ ರವಿಚಂದ್ರ ಕುಟುಂಬಕ್ಕೆ ತಲಾ 25,000 ರೂ. ಆರ್ಥಿಕ ನೆರವನ್ನು ನೀಡಲಾಯಿತು. ಉರಗ ತಜ್ಞ ಬಾಬು ಸಾಲ್ಯಾನ್‌, ಪ್ರತಿಭಾನ್ವಿತ ವಿದ್ಯಾರ್ಥಿ ಸಹನ ಕೊಳ ಅವರನ್ನು ಸಮ್ಮಾನಿಸಲಾಯಿತು. 38 ಮಂದಿ ಹುಲಿವೇಷಧಾರಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಸಮರ್ಪಣ ತಂಡದ ಪ್ರಮುಖ ರಕ್ಷಿತ್‌ ಕೋಟ್ಯಾನ್‌ ಪ್ರಸ್ತಾವನೆಗೈದರು. ಕರುಣಾಕರ ಬಂಗೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಾನಂದ ವಂದಿಸಿದರು.

ಭಾರತೀಯ ಯೋಧರಿಗಾಗಿ ನಿತ್ಯ ಮನಮಿಡಿಯುವ ಈ ದೇಶಪ್ರೇಮಿ ಯುವಕರು ದೇಶರಕ್ಷಣೆಯ ಸಂದರ್ಭದಲ್ಲಿ ಮಡಿದವರಿಗೆ, ಅಂಗವಿಕಲರಾದ ಯೋಧರ ಕುಟುಂಬಗಳಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಸಮರ್ಪಣ ತಂಡವನ್ನು ಕಟ್ಟಿ ಶ್ರೀಕೃಷ್ಣಾಷ್ಟಮಿಯಂದು ಮೂರು ವರ್ಷದ ಪುಟಾಣಿಗಳು ಸೇರಿದಂತೆ ಮಲ್ಪೆಯ 38 ಯುವಕರ ತಂಡ ಹುಲಿವೇಷ ಹಾಕಿ ಹಣ ಸಂಗ್ರಹಿಸಿ ರಾಜ್ಯದ 12 ಮಂದಿ ತೀರಾ ಬಡ ಯೋಧ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ನಂತೆ ಗೌರವಧನವನ್ನು ವಿತರಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English