ಪಾಟ್ನಾ: ಬಿಹಾರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಗಳೆಲ್ಲಾ ಉಕ್ಕಿ ಹರಿಯುತ್ತಿವೆ. ಶಾಲೆಗೆ ಹೋಗುತ್ತಿದ್ದ ವೇಳೆ ನದಿ ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನ 10 ವರ್ಷದ ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾನೆ.
ಬಿಹಾರದ ಜಹಾನಾಬಾದ್ ಜಿಲ್ಲೆ ಗೋಪಾಲಪುರಿ ಸಮೀಪದ ಜೀವಾ ಗ್ರಾಮದ ವಿಪಿನ್ ಈ ಒಂದು ಸಾಹಸ ಮೆರೆದ ಬಾಲಕ. 12 ವರ್ಷ ವಯಸ್ಸಿನ 6 ಮಂದಿ ಬಾಲಕಿಯರು ಶಾಲೆಗೆ ಹೋಗುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಬಾಲಕ ವಿಪಿನ್ ಜೀವದ ಹಂಗು ತೊರೆದು ತಕ್ಷಣ ನದಿಗೆ ಧುಮುಕಿದ್ದಾನೆ.
ನಂತರ ಒಬ್ಬೊಬ್ಬರನ್ನಾಗಿ ದಡದ ಸಮೀಪಕ್ಕೆ ಎಳೆದು ತಂದಿದ್ದಾನೆ. ನಂತರ ಬಾಲಕಿಯರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ 6 ಬಾಲಕಿಯರ ಪೈಕಿ ನಾಲ್ವರನ್ನು ರಕ್ಷಣೆ ಮಾಡಿರುವ ಬಾಲಕನ ಸಾಹಸವನ್ನು ಗ್ರಾಮಸ್ಥರು ಹೊಗಳಿದ್ದಾರೆ. ಆದರೆ ಇಬ್ಬರು ಬಾಲಕಿಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
Click this button or press Ctrl+G to toggle between Kannada and English