ಕೊಲ್ಲೂರು: ಖ್ಯಾತ ಪಂಚಭಾಷಾ ತಾರೆ ಶರತ್ ಕುಮಾರ್ ಹಾಗೂ ಅವರ ಪತ್ನಿ ಖ್ಯಾತ ನಟಿ ರಾಧಿಕಾ ಅವರು ಆ. 30ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮಾತನಾಡಿದ ಅವರು, ಶ್ರೀ ದೇವಿಯ ಅನುಗ್ರಹದಿಂದ ಸಿನೆಮಾ ರಂಗದಲ್ಲಿ ಕಿಂಚಿತ್ ಸೇವೆ ಮಾಡಲು ಸಾಧ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡುವ ಪರಂಪರೆ ಹೊಂದಿದ್ದು, ರಿವಾಜಿನಂತೆ ಈ ಬಾರಿ ದೇವಿಯ ದರ್ಶನಕ್ಕೆ ಆಗಮಿಸಿರುವುದಾಗಿ ಹೇಳಿದರು.
ದೇಗುಲದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅರ್ಚಕರು ಹಾಗೂ ಸಿಬಂದಿಗಳು ಶರತ್ ಕುಮಾರ್ ದಂಪತಿಯನ್ನು ಸ್ವಾಗತಿಸಿದರು.
Click this button or press Ctrl+G to toggle between Kannada and English