ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಮಹಾಮುಷ್ಕರ

12:37 PM, Wednesday, August 31st, 2016
Share
1 Star2 Stars3 Stars4 Stars5 Stars
(No Ratings Yet)
Loading...

Bike-Rallyಮಂಗಳೂರು: ಕಾರ್ಮಿಕ ವರ್ಗದ ಪ್ರಮುಖ ಬೇಡಿಕೆಗಳನ್ನುಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸಿಐಟಿಯು ಹಾಗೂ ಡಿವೈಎಫ್ಐ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ರ‍್ಯಾಲಿ ಉದ್ಘಾಟಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿ ನಿರುದ್ಯೋಗ ಸಮಸ್ಯೆ ಹೆಚ್ಚಿಸಿದೆ. ದೊಡ್ಡ ಬಂಡವಾಳಗಾರರ ಹಿತಾಸಕ್ತಿಗೆ ಅನುಗುಣವಾಗಿ ಆರ್ಥಿಕ ನೀತಿ, ಕೈಗಾರಿಕಾ ನೀತಿ ಜಾರಿಗೊಳಿಸುತ್ತಿದೆ. ಅವರಿಗಾಗಿ ದೇಶದ ಕಾರ್ಮಿಕ ವರ್ಗ ಹೋರಾಟ ಮಾಡಿ ಪಡೆದ ಕಾರ್ಮಿಕ ಕಾನೂನುಗಳನ್ನು ಸುಧಾರಣೆ ಹೆಸರಿನಲ್ಲಿ ಸಂಹಿತೆಯಾಗಿ ಪರಿವರ್ತಿಸಲು ಹೊರಟಿದೆ.

ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿದೆ. ರಸ್ತೆ ಸುರಕ್ಷತಾ ಕಾಯ್ದೆ 2015 ಇಡೀ ದೇಶದ ಚಾಲಕ ವರ್ಗಕ್ಕೆ ಮಾರಕವಾಗಿದೆ. ರಸ್ತೆ ಸಾರಿಗೆಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಲೂಟಿ ಮಾಡಲು ವ್ಯವಸ್ಥೆ ಮಾಡುತ್ತಿದೆ ಎಂದು ದೂರಿದರು.

Bike-Rallyಮಧ್ಯಮವರ್ಗ ಹಾಗೂ ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆ ಎಂಬುದು ಇಲ್ಲ. ಪಿಎಫ್‌, ಇಎಸ್ಐ ಹಾಗೂ ಗ್ರ್ಯಾಚ್ಯುಟಿ ಕಾಯ್ದೆ ಮೇಲೆ ದಾಳಿ ಪ್ರಾರಂಭವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಎಲ್ಲಾ ರಂಗಗಳನ್ನು ತೆರೆದಿಡಲಾಗುತ್ತಿದೆ.

ದೇಶದ ಆಂತರಿಕ ಭದ್ರತೆಗೆ ಅಪಾಯ ಬಂದಿದೆ. ಸ್ಕೀಂ ಕಾರ್ಮಿಕ ರಂಗದ ಅಕ್ಷರ ದಾಸೋಹ, ಆಶಾ, ಅಂಗನವಾಡಿ ನೌಕರರು ಕನಿಷ್ಠ ವೇತನದಲ್ಲಿ ಸಾಮಾಜಿಕ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. ದೇಶದ ಕೃಷಿ ನೀತಿಯಿಂದ ರೈತರು ಕಂಗಾಲಾಗಿದ್ದು, ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದರು.

Bike-Rally-3

Bike-Rally

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English