ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ.
“ಕರ್ನಾಟಕ-ನಾಳೆಗಳ ನಿರ್ಮಾಣ” ಎಂಬ ಪರಿಕಲ್ಪನೆಯೊಂದಿಗೆ ನಡೆಯುವ 13ನೇ ವರ್ಷದ ಈ ನುಡಿಸಿರಿಯಲ್ಲಿ ಅತ್ಯುತ್ತಮ ವಿಚಾರಗೋಷ್ಠಿಗಳು, ಕವಿ ಸಮಯ-ಕವಿ ನಮನ ಸೇರಿದಂತೆ ಈ ಬಾರಿ “ನನ್ನ ಕಥೆ-ನಿಮ್ಮ ಜೊತೆ” ಎಂಬ ಹೊಸ ಶೀರ್ಷಿಕೆಯೊಂದಿಗೆ ಕಲಾವಿದರ ಜೀವನ ಚರಿತ್ರೆ ಪರಿಚಯವಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ.
ನುಡಿಸಿರಿಗೆ ಪ್ರತಿನಿಧಿಯಾಗಲು ರೂ.100ನ್ನು ಪಾವತಿಸಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 08258-261229ನ್ನು ಸಂಪರ್ಕಿಸಬಹುದು.
Click this button or press Ctrl+G to toggle between Kannada and English