ಮುಷ್ಕರದಿಂದ ಅಸ್ತವ್ಯಸ್ತಗೊಂಡ ಜನಜೀವನ

9:53 AM, Saturday, September 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

bundಬದಿಯಡ್ಕ: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅನೇಕ ಕಾರ್ಮಿಕ ಸಂಘಟನೆಗಳು ಸಂಯುಕ್ತವಾಗಿ ಕರೆ ನೀಡಿದ್ದ ರಾಷ್ಟ್ರೀಯ ಮುಷ್ಕರ ಜಿಲ್ಲೆಯಾದ್ಯಂತ ಯಶಸ್ವಿಯಾಯಿತು.

ಗುರುವಾರ ರಾತ್ರಿ ೧೨ರಿಂದ ಆರಂಭಗೊಂಡ ಮುಷ್ಕರ ಶುಕ್ರವಾರ ಸಂಜೆಯವರೆಗೂ ನಡೆಯಿತು. ಮುಷ್ಕರದಿಂದ ಅಂಗಡಿಮುಗ್ಗಟ್ಟು, ಸರಕಾರಿ ಶಾಲಾ ಕಾಲೇಜು, ಕಛೇರಿ, ಹೋಟೆಲ್ ದಿಪೂರ್ತಿ ಮುಚ್ಚಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು. ಉಪ್ಪಳ, ಕೈಕಂಬ, ನಯಾಬಝಾರ್, ಬಂದ್ಯೋಡು, ಕುಂಬಳೆ,ಮಂಜೇಶ್ವರ,ಹೊಸಂಗಡಿ ಸಹಿತ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಕಡೆಗಳ ಸಹಿತ ಪೆರ್ಲ ಪೇಟೆ, ಬದಿಯಡ್ಕ, ನೀರ್ಚಾಲು, ಸೀತಾಂಗೋಳಿ, ಮುಳ್ಳೇರಿಯಾ, ಆದೂರು, ಅಡೂರಪರಿಸರದಲ್ಲಿ ಯಾವುದೇ ಅಂಗಡಿಗಳನ್ನು ತೆರೆದಿಲ್ಲವಾದರೂ ಗ್ರಾಮೀಣ ಪರಿಸರದ ಅಂಗಡಿಗಳು ಕಾರ್ಯವನ್ನಾಚರಿಸುತ್ತಿದ್ದುದು ಕಂಡು ಬಂತು.

ಕಡೇ ಗಳಿಗೆಯಲ್ಲಿ ಮಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಜಿಲ್ಲೆಯಿಂದ ಮಂಗಳೂರಿಗೆ ತೆರಳು ವಿದ್ಯಾರ್ಥಿಗಳು ನಿರಾತಂಕವಾಗಿ ರಜೆಯ ಮಜವನ್ನು ಅನುಭವಿಸಿದರು.

ರೈಲು ಸಂಚಾರ ಎಂದಿನಂತಿದ್ದರೂ ಪ್ರತಿ ಸಲದ ಮುಷ್ಕರದಂತೆ ನೂಕು ನುಗ್ಗಲು ಕಂಡು ಬರಲಿಲ್ಲ. ಲಾರಿ, ಬಸ್ಸು ಸಹಿತ ಘನ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡದೇ ಇದ್ದುದರಿಂದ ಹೆದ್ದಾರಿ ಶಾಂತವಾಗಿ ಕಂಡು ಬಂತು. ಕೇವಲ ಹೆದ್ದಾರಿಯಲ್ಲಿ ಬೈಕು, ಕಾರುಗಳದ್ದೇ ಕಾರುಬಾರು ಜೋರಾಗಿತ್ತು. ಎಲ್ಲಾ ಪ್ರಮುಖ ಭಾಗಗಳಲ್ಲಿ ಪೋಲಿಸರು ಕರ್ತವ್ಯ ನಿರ್ವಹಿಸಿ ಯಾವುದೇ ಅಹಿತರಕರ ನಡೆಯದಂತೆ ಜಾಗ್ರತೆ ವಹಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳು ಪೆರ್ಲ,ಬದಿಯಡ್ಕ,ಮುಳ್ಳೇರಿಯಾ,ಹೊಸಂಗಡಿ ಮೊದಲಾದೆಡೆ ಸಂಯುಕ್ತ ಕಾರ್ಮಿಕ ಸಂಘಟನೆಗಳು ಮೆರವಣಿಗೆ ನಡೆಸಿದವು.ಕೆಲವೆಡೆ ಒತ್ತಾಯಪೂರ್ವಕ ಅಂಗಡಿ ಮುಗ್ಗಟ್ಟುಗಳನ್ನು ಬೆಳಿಗ್ಗೆ ಮುಚ್ಚಿಸಿರುವುದೂ ಕಂಡುಬಂದಿದೆ.

ಇಲ್ಲಿ ಮುಷ್ಕರ ಆಬಾಧಿತ ಬದಿಯಡ್ಕ ಸಮೀಪದ ನೀರ್ಚಾಲು ಹಿಂದಿನಿಂದಲೇ ಯಾವುದೇ ಮುಷ್ಕರವಾದರೂ ನಿತ್ಯದಂತೆ ಕಾರ್ಯಾಚರಿಸುತ್ತಿರುವುದು ವಿಶೇಷ.ಶುಕ್ರವಾರವೂ ನೀರ್ಚಾಲಿನಲ್ಲಿ ಮುಷ್ಕರ ಯಾವುದೇ ಪರಿಣಾಮ ಬೀರಿರಲಿಲ್ಲ.ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ಕಾರ್ಯಾಚರಿಸಿದವು.ಆದರೆ ವಾಹನಗಳ ಸಂಚಾರವಿಲ್ಲದಿದ್ದರಿಂದ ಜನ ಸಂದಣಿ ಇದ್ದಿರಲಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English