ತುಳುವರ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದು: ಶಕುಂತಲಾ ಶೆಟ್ಟಿ

10:09 AM, Saturday, September 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

Thuluvere-ayanoಬದಿಯಡ್ಕ: ಚಾರಿತ್ರಿಕವಾಗಿ ಪ್ರಾಚೀನ ತುಳುನಾಡು ಸೌಹಾರ್ಧತೆ,ಭಾವೈಕ್ಯತೆಗೆ ವಿಶಿಷ್ಟ ಕೊಡುಗೆ ನೀಡಿದ್ದು,ತುಳುನಾಡೊಳಗಿನ ಪ್ರತಿಯೊಬ್ಬರೂ ತುಳುವರೆಂಬ ಭಾವ ತೀವ್ರತೆ ಇತ್ತು. ಆದರೆ ಇಂದು ಕುಸಿದಿರುವ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದೆಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಸಮಿತಿಯ ನೇತೃತ್ವದಲ್ಲಿ ಡಿ.9 ರಿಂದ ೧೩ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಕಾರ್ಯಾಲಯವನ್ನು ಬದಿಯಡ್ಕ ಗಲ್ಫ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸೋಣ ಅಮಾವಾಸ್ಯೆಯ ಪರ್ವದಿನ ಬೆಳಗಿಸಲ್ಪಟ್ಟ ತುಳು ದೀಪ ಸಂಸ್ಕೃತಿ,ಸಂವರ್ಧನೆಯಲ್ಲಿ ಪ್ರಖರ ಪ್ರಭೆಯಾಗಿ ಹೊರಹೊಮ್ಮಿ ತುಳುವಿಗೆ ಧೀಮಂತಿಕೆಯನ್ನು ತರುವಲ್ಲಿ ಸಹಕಾರಿಯಾಗಲಿ. ಇಂದು ಕುಸಿದು ಅಪಾಯಕಾರಿಯಾಗುತ್ತಿರುವ ಭಾಷಾ ಸಾಮರಸ್ಯವನ್ನು ಪುನರ್ ಸ್ಥಾಪಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಡ್ವ.ಸಿ.ಎಚ್ ಕುಞಿಂಬು ಮಾತನಾಡಿ,ಈ ಹಿಮದೆ ಆಯೋಜಿಸಿದ್ದ ತುಳುವೆರೆ ಆಯನೊದಿಂದ ಪ್ರಭಾವಿತನಾಗಿ ತಾನು ಶಾಸಕನಾಗಿದ್ದ ವೇಳೆ ಕೇರಳ ತುಳು ಅಕಾಡೆಮಿ ಸ್ಥಾಪಿಸಲು ಪ್ರೇರಣೆಯಾಗಿತ್ತು ಎಂದು ನೆನಪಿಸಿದರು.ಶ್ರೀಮಂತ ಚಾರಿತ್ರಿಕ ಹಿನ್ನೆಲೆಯುಳ್ಳ ತುಳು ಭಾಷೆಯ ಸಾರ್ವಕಾಲಿಕ ಮಹತ್ವಗಳ ಬಗ್ಗೆ ಸಾಕಷ್ಟು ಅಧ್ಯಯನ,ಚಿಂತನೆಗಳು ತುಳುವೆರೆ ಆಯನೊದ ಮೂಲಕ ಸಾಕಾರಗೊಂಡು ಹೊಸತನಗಳಿಗೆ ದಾರಿಮಾಡಿಕೊಡಲೆಂದು ತಿಳಿಸಿದರು.

ವಿಶ್ವ ತುಳುವೆರೆ ಆಯೊನೊದ ಜನಮೈತ್ರಿ(ತುಳುನಾಡ ಒತ್ತೊರ್ಮೆ)ಕಾರ್ಯಕ್ರಮ ಸಂಚಾಲಕ ಮಾಹಿನ್ ಕೇಳೋಟ್,ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡ ಕುಂಜಾರು ಮೊಹಮ್ಮದ್ ಹಾಜಿ,ವಿಶ್ವ ತುಳುವೆರೆ ಆಯನೊ ಕೂಟದ ಬಾಬು ಪಚ್ಲಂಪಾರೆ, ಕೆ.ಕೆ.ಸ್ವಾಮಿಕೃಪಾ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕಾಧ್ಯಕ್ಷ ಎಸ್ ಎನ್ ಮಯ್ಯ,ಕೇರಳ ತುಳು ಅಕಾಡೆಮಿ ಸದಸ್ಯ ಚಂದ್ರಹಾಸ ರೈ ಪೆರಡಾಲಗುತ್ತು,ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಂ ಪ್ರಸಾದ್ ಮಾನ್ಯ,ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಜಗನ್ನಾಥ ಶೆಟ್ಟಿ ಬದಿಯಡ್ಕ,ಭಾಸ್ಕರ ಕುಂಬಳೆ,ರವಿ ನವಶಕ್ತಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಧನಂಜಯ,ಪುರುಷೋತ್ತಮ ಆಚಾರ್ಯ,ಸುಧೀರ್ ಕುಮಾರ್ ರೈ,ಕೃಷ್ಣ ಶರ್ಮಾ ನೇರೆಪ್ಪಾಡಿ,ಸ್ಟೀಪನ್ ಪ್ರದೀಪ್ ಕ್ರಾಸ್ತಾ,ಪಾರೆಕ್ಕಾರ್ ಮೊಹಮ್ಮದ್,ಶಂಕರ ಭಟ್,ಜಗನ್ನಾಥ ಆಳ್ವ ಮೂಲಡ್ಕ,ದೇವೀ ಪ್ರಸಾದ್ ಮೀಂಜ,ಸಹನಾ ಶೆಟ್ಟಿ.ಕೊಡಂಗೆ,ಸುರೇಖಾ,ಪ್ರದೀಪ್ ರೈ ಕಲ್ಲಕಳೆಯ,ಹರ್ಷ ರೈ ಪುತ್ರಕಳ,ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವ ತುಳುವೆರೆ ಆಯನೊ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ,ಸಮಿತಿ ಖಜಾಂಜಿ ಡಾ.ಶ್ರೀನಿಧಿ ಸರಳಾಯ ವಂದಿಸಿದರು.ಡಾ.ರಾಜೇಶ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English