ಯುಪಿಸಿಎಲ್‌ ಯೋಜನೆಯ ಬಹುತೇಕ ಸಮಸ್ಯೆಗಳನ್ನು ಅದಾನಿ ಸಮೂಹವು ನೀಗಿಸಿದೆ: ತೋನ್ಸೆ ಜಯಕೃಷ್ಣ

1:25 PM, Saturday, September 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

UPCLಪಡುಬಿದ್ರಿ: ಯುಪಿಸಿಎಲ್‌ ಯೋಜನೆಯ ಬಹುತೇಕ ಸಮಸ್ಯೆಗಳನ್ನು ಅದಾನಿ ಸಮೂಹವು ನೀಗಿಸಿದೆ. ಈ ಜಿಲ್ಲೆಗೆ ನಾಗಾರ್ಜುನ, ಲ್ಯಾಂಕೋ ಕಂಪೆನಿಗಳು ಬಹಳಷ್ಟು ಅನ್ಯಾಯ ಮಾಡಿದ್ದವು. ಆದರೆ ಅವುಗಳನ್ನೆಲ್ಲ ಅದಾನಿ ಮೀರಿ ನಿಂತಿದೆ. ಹೀಗೆಯೇ ಆದಲ್ಲಿ ಯೋಜನೆಯ ವಿಸ್ತರಣೆಗೇನೂ ಅಡ್ಡಿಯಾಗದು ಎಂದು ಜಯ ಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಹೇಳಿದ್ದಾರೆ.

ಎಲ್ಲೂರಿನ ಅದಾನಿ ಯುಪಿಸಿಎಲ್‌ ಯೋಜನಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು ಉಡಾನ್‌ ಕಾರ್ಯಕ್ರಮದನ್ವಯ ಯುಪಿಸಿಎಲ್‌ ಸ್ಥಾವರದ ವಿವಿಧ ವಿಭಾಗಗಳನ್ನು ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಉಡುಪಿ ಜಿಲ್ಲೆಯು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಎಫ್‌ಜಿಡಿಯನ್ನು ಹೊಂದಿರುವ ದೇಶದ ಮೂರನೇ ಯೋಜನೆಯಾಗಿದೆ.

ಯೋಜನಾ ಪ್ರದೇಶದೊಳಗೂ ಮಲ್ಲಿಗೆ ಮತ್ತು ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದು ಹಾರುಬೂದಿಯನ್ನು ಶೇ. 100ರಷ್ಟು ವಿವಿಧ ಸಿಮೆಂಟ್‌ ಸ್ಥಾವರಗಳಿಗೆ ರವಾನಿಸಲಾಗುತ್ತಿದೆ. ಅದಾನಿ ಸಮೂಹವು ಸ್ಥಳೀಯ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸಿಕೊಳ್ಳುತ್ತಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಅವರು ಮಾತನಾಡಿ, ಅದಾನಿ ಸಮೂಹವು ಉಡುಪಿ ಜಿಲ್ಲೆಯ ಪರಿಸರ ರಕ್ಷಣೆಗೆ ಬದ್ಧವಾಗಿದೆ. ವಿಸ್ತರಣೆಗೂ ನಮ್ಮ ಸಿಎಸ್‌ಆರ್‌ ಕಾರ್ಯಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ. ಪರಿಸರ ದತ್ತಾಂಶಗಳ ಪರಿಶೀಲನೆಗಾಗಿ ಯೋಜನಾ ಪ್ರದೇಶದ ಸುತ್ತಮುತ್ತ 10 ಜಾಗಗಳಲ್ಲಿ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ದತ್ತಾಂಶಗಳು ತಮ್ಮ ವೆಬ್‌ಸೈಟಲ್ಲೂ ಲಭ್ಯವಿವೆ ಎಂದರು. ‘ಅದಾನಿ’ ಜನತೆಯ ಯೋಜನೆಯಾಗಿದೆ.

ಕರ್ನಾಟಕದ ಪಾವಗಡದಲ್ಲಿ 300 ಮೆ.ವಾ. ಸೋಲಾರ್‌ ವಿದ್ಯುತ್‌ ಯೋಜನೆಯೂ ಸೇರಿದಂತೆ ಅದರ ಸುತ್ತಮುತ್ತಲಿನ 12 ತಾಲೂಕುಗಳಲ್ಲಿ ತಲಾ 20 ಮೆ. ವ್ಯಾ. ನ ಸೋಲಾರ್‌ ವಿದ್ಯುತ್‌ ಉತ್ಪಾದನೆಗೂ ಮುಂದಡಿಯಿರಿಸಿದೆ. ಇದೀಗ ನಾವು ಶೇ. 100ರಷ್ಟು ಕರ್ನಾಟಕ ರಾಜ್ಯಕ್ಕೆ ವಿದ್ಯುತ್‌ ನೀಡುತ್ತಿದ್ದೇವೆ. ಅವಿಭಜಿತ ದ.ಕ. ಜಿಲ್ಲೆಯ ಮೆಸ್ಕಾಂಗೆ ನೀಡುವ ವಿದ್ಯುತ್ತಿನ ಶೇಕಡಾವಾರು 8 ಪ್ರಮಾಣವನ್ನು ಏರಿಸಿಕೊಳ್ಳಲು ಪ್ರಯತ್ನಗಳು ನಡೆಯಬೇಕಿವೆ ಎಂದರು.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ ಅದಾನಿ ಯುಪಿಸಿಎಲ್‌ ಕಾರ್ಯ ನಿರ್ವಹಣೆ, ಸಿಎಸ್‌ಆರ್‌ ವಿನಿಮಯ, ಪರಿಸರ ರಕ್ಷಣಾ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ, ಕೋಶಾಧಿಕಾರಿ ಜಯಂತ್‌ ಕೆ. ಶೆಟ್ಟಿ, ಸಮಿತಿಯ ಸದಸ್ಯರಾದ ಎಸ್‌.ಕೆ. ಶ್ರೀಯಾನ್‌, ತುಳಸೀದಾಸ್‌ ಅಮೀನ್‌, ಸುರೇಶ್‌ ಶೆಟ್ಟಿ ಯೆಯ್ನಾಡಿ, ಹ್ಯಾರಿಸ್‌ ಸಿಕ್ವೇರ, ಮುನಿರಾಜ್‌ ಜೈನ್‌, ರಾಮಚಂದ್ರ ಗಾಣಿಗ, ಎಚ್‌. ಮೋಹನ್‌ದಾಸ್‌, ವಾಸು ದೇವಾಡಿಗ, ರವಿ ದೇವಾಡಿಗ, ಯುಪಿಸಿಎಲ್‌ ಡಿಜಿಎಂ ಸುದರ್ಶನ್‌ ಪ್ರಸಾದ್‌, ಎಜಿಎಂ ಗಿರೀಶ್‌ ನಾವಡ, ಪ್ರಬಂಧಕ ರವಿ ಜೀರೆ, ಸುಂದರ್‌ ರೇ, ಚೆನ್ನಬಸಪ್ಪ ಮತ್ತಿತರರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English