ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಣೆ

12:38 PM, Wednesday, September 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

Parappana-agraharaಉಡುಪಿ: ಬೆಂಗಳೂರಿನಲ್ಲಿ ಚಾತುರ್ಮಾಸ್ಯವ್ರತ ಕೈಗೊಂಡಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಾದ ವಿತರಿಸಿದರು.

ಶ್ರೀಕೃಷ್ಣನ ಅವತಾರವಾದದ್ದೂ ಜೈಲಿನಲ್ಲಿ, ಅದು ಲೋಕಕಲ್ಯಾಣಕ್ಕಾಗಿ, ಸತ್ಯವನ್ನು ಎತ್ತಿಹಿಡಿಯಲು. ದೇವರಿಗೆ ಸಂಪೂರ್ಣ ಶರಣಾದರೆ ಸಹಜವಾಗಿ ಸರಿಯಾದ ಜೀವನ ಪಥ ಕಾಣುತ್ತದೆ. ಕಾರಾಗೃಹವಾಸಿಗಳಿಗೆ ವಾಲ್ಮೀಕಿ ಮಾದರಿ.

ವಾಲ್ಮೀಕಿಯವರು ನಾರದರನ್ನು ಭೇಟಿ ಮಾಡುವವರೆಗೆ ಸತ್ಯ ಮತ್ತು ಸನ್ಮಾರ್ಗದಲ್ಲಿ ನಂಬಿಕೆ ಹೊಂದಿರಲಿಲ್ಲ. ಅನಂತರ ವಾಲ್ಮೀಕಿಗೆ ತಪ್ಪಿನ ಅರಿವಾಯಿತು. ಅವರಿಗೆ ರಾಮ ಮಂತ್ರವನ್ನು ನಾರದರು ಉಪದೇಶಿಸಿದರು.ಮುಂದೇನಾಯಿ ತೆನ್ನುವುದು ಗೊತ್ತಿರುವ ವಿಷಯ.

ಶ್ರೀರಾಮನ ಅನುಗ್ರಹದಿಂದ ದೊಡ್ಡ ಪುರಾಣ ಗ್ರಂಥ ರಾಮಾಯಣವನ್ನು ಅವರು ರಚಿಸಿದರು. ಒಂದು ಬಾರಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ನೀವು ಜನರಿಗೆ ಸನ್ಮಾರ್ಗವನ್ನು ತೋರಿಸಬೇಕು, ಹಿಂದಿನ ನೋವಿಗೆ ಮರಳಬಾರದು. ಇದು ಸಮಾಜಕ್ಕೆ ಸಲ್ಲಿಸುವ ದೊಡ್ಡ ಕೊಡುಗೆ ಎಂದು ಶ್ರೀಗಳು ಕಿವಿಮಾತು ನುಡಿದರು.

ಬಂದೀಖಾನೆ ಡಿಐಜಿ ಕೃಷ್ಣಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English