ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಸಂಘನಿಕೇತನದ ಗಣೇಶ

1:20 PM, Wednesday, September 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

Sanganikethanaಮಂಗಳೂರು: ಹಿಂದೂಗಳು ಗಣೇಶನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಮಂಗಳೂರಿನ ಸಂಘನಿಕೇತನ ಇಂದು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಯಿತು.

69ನೇ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ವಿಘ್ನವಿನಾಶಕ ಗಣೇಶನಿಗೆ ಇಂದು ಬಿಕರ್ನಕಟ್ಟೆ ಇನ್‍ಫೆಂಟ್ ಜೀಸಸ್ ಬಾಲಯೇಸು ಮಂದಿರದ ಕ್ರೈಸ್ತ ಧರ್ಮಗುರುಗಳು ಹಾಗೂ ಕುಲಶೇಖರ ಸೇಕ್ರೆಡ್ ಹಾರ್ಟ್ ಕಾನ್ವೆಂಟ್‍ನ ಭಗಿನಿಯರು ಹಣ್ಣುಹಂಪಲು, ರೇಷ್ಮೆ ಸೀರೆ ಅರ್ಪಿಸಿದರು.

ಬಾಲಯೇಸು ಮಂದಿರದ ನಿರ್ದೇಶಕ ಫಾ. ಎಲಿಯಾಸ್ ಡಿಸೋಜಾ, ಉಪ ನಿರ್ದೇಶಕ ಫಾ. ಪ್ರಕಾಶ್ ಡಿಕುನ್ಹಾ ಕುಲಶೇಖರ ಸೇಕ್ರೆಡ್ ಹಾರ್ಟ್ ಸಾಂತಾಕ್ರೂಝ್ ಕಾನ್ವೆಂಟ್‍ನ ಸಿಸ್ಟರ್ ಪೊಲೀರಿಟಾ, ಸಿಸ್ಟರ್ ಗ್ಲಾಡಿಸ್, ಸಿ. ಸಿಂಪ್ಲಾ ಹಾಗೂ ಸಿ. ಡಿಯೋನಿಸಾ ಸೇರಿದಂತೆ 10 ಮಂದಿ ಕ್ರೈಸ್ತ ಬಾಂಧವರು ಬಂದು ಗಣೇಶನಿಗೆ ಬಾಳೆಹಣ್ಣು, ಹಣ್ಣು ಹಂಪಲು ಹಾಗೂ ಬನಾರಸ್ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ಅರ್ಪಿಸಿದರು. ಪ್ರತಿಯಾಗಿ ಗಣೇಶೋತ್ಸವ ಸಮಿತಿ ಪರವಾಗಿ ಅತಿಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಆರ್‌ಎಸ್‌ಎಸ್‌ನ ಕ್ಷೇತ್ರಿಯ ಸಂಘ ಚಾಲಕ ವಿ. ನಾಗರಾಜ್ ನೇತೃತ್ವದಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗೂ ಭಗಿನಿಯರನ್ನು ಸ್ವಾಗತಿಸಲಾಯಿತು. ಈ ಸಂದರ್ಭ ಆರ್‌ಎಸ್‌ಎಸ್‌ನ ಸಹ ಪ್ರಾಂತ ಪ್ರಚಾರಕ ಗುರುಪ್ರಸಾದ್, ವಿಭಾಗ ಪ್ರಚಾರಕ ಚಂದ್ರಬಾಬು, ಮಂಗಳೂರು ನಗರ ಸರ ಸಂಘ ಚಾಲಕ ಸುನೀಲ್ ಆಚಾರ್ಯ, ಪ್ರಾಂತ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ.ಎಸ್., ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರವೀಣ್ ಕುಮಾರ್, ಮಂಗಳೂರು ಮಹಾನಗರ ಪ್ರಚಾರಕ ಪ್ರಮುಖ್ ಗಣೇಶ್ ಪ್ರಸಾದ್, ಕೆಎಸ್‍ಎಸ್ ಸಮಿತಿ ಕಾರ್ಯದರ್ಶಿ ರಘುವೀರ್ ಕಾಮತ್ ಉಪಸ್ಥಿತರಿದ್ದರು.

ಈ ಬಗ್ಗೆ ಮಾತನಾಡಿದ ಬಾಲ ಯೇಸು ಮಂದಿರದ ಉಪ ನಿರ್ದೇಶಕ ಫಾ. ಪ್ರಕಾಶ್ ಡಿಕುನ್ನಾ, ಮೂರು ದಿನಗಳ ಹಿಂದೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಅದರಂತೆ ಭಾಗವಹಿಸಿದ್ದೇವೆ. ಪರಸ್ಪರ ಗೌರವ, ಸಹಬಾಳ್ವೆಯಿಂದ ನಡೆದರೆ ಸಮಾಜದಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು.

Sanganikethanaಸೌಹಾರ್ದತೆ ಹಾಗೂ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಬಿಕರ್ನಕಟ್ಟೆಯ ಇನ್‍ಫೆಂಟ್ ಜೀಸಸ್ ಚರ್ಚ್‍ನಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೀಗ ಗಣೇಶೋತ್ಸವಕ್ಕೆ ಆಹ್ವಾನ ನೀಡಿದ ಮೇರೆಗೆ ಬಾಲ ಯೇಸು ಮಂದಿರದ ಕ್ರೈಸ್ತ ಧರ್ಮಗುರುಗಳು ಹಾಗೂ ಭಗಿನಿಯರು ಆಗಮಿಸಿರುವುದು ಸಂತಸ ತಂದಿದೆ. ಉಭಯ ಧರ್ಮಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವಲ್ಲಿ ಇಂತಹ ಭೇಟಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಆರ್‌ಎಸ್‌ಎಸ್‌ನ ಕ್ಷೇತ್ರಿಯ ಸಂಘ ಚಾಲಕ ವಿ. ನಾಗರಾಜ್ ಹೇಳಿದರು.

Sanganikethana

Sanganikethana-04

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English