ಮದರ್‌ ತೆರೇಸಾ ಅವರನ್ನು ಸಂತ ಪದವಿಗೇರಿಸಿದ ಪ್ರಯುಕ್ತ ಪಾಲ್ದನೆಯಲ್ಲಿ ಸಂಭ್ರಮಾಚರಣೆ

12:07 PM, Thursday, September 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

mother-theresaಮಂಗಳೂರು: ಮದರ್‌ ತೆರೇಸಾ ಅವರನ್ನು ಸೆ. 4ರಂದು ಸಂತ ಪದವಿಗೇರಿಸಿದ ಪ್ರಯುಕ್ತ ಮದರ್‌ ತೆರೇಸಾ ಅವರಿಗೆ ಸಮರ್ಪಿಸಿದ ಜಗತ್ತಿನ ಮೊದಲ ಚರ್ಚ್‌ ಇರುವ ಮಂಗಳೂರಿನ ಪಾಲ್ದನೆಯಲ್ಲಿ ಸೆ. 5ರಂದು ಸಂಭ್ರಮಾಚರಣೆ ನಡೆಯಿತು.

ಪಾಲ್ದನೆಯ ಪುನೀತೆ ಮದರ್‌ ತೆರೇಸಾ ಚರ್ಚ್‌ಗೆ ಕೋಲ್ಕೊತಾದ ಸಂತ ತೆರೇಸಾ ಚರ್ಚ್‌ ಎಂಬುದಾಗಿ ಮರು ನಾಮಕರಣ, ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ನೇತೃತ್ವದಲ್ಲಿ 25ಕ್ಕೂ ಮಿಕ್ಕಿ ಗುರುಗಳ ಸಹಭಾಗಿತ್ವದಲ್ಲಿ ಸಂಭ್ರಮದ ಬಲಿಪೂಜೆ, ಮದರ್‌ ತೆರೇಸಾ ನೊವೇನಾ ಪುಸ್ತಕದ ಬಿಡುಗಡೆ ಮತ್ತು ಸಮ್ಮಾನ ಕಾರ್ಯಕ್ರಮಗಳು ಜರಗಿದವು. ಹಲವಾರು ಮಂದಿ ಧರ್ಮ ಭಗಿನಿಯರು ಮತ್ತು ಕೆಥೋಲಿಕ್‌ ಕ್ರೈಸ್ತರು ಭಾಗವಹಿಸಿದ್ದರು.

ಅಸಾಮಾನ್ಯ ವ್ಯಕ್ತಿತ್ವ ಬಿಷಪ್‌ ಅಲೋಶಿಯಸ್‌ ಪಾವ್‌ ಡಿ’ಸೋಜಾ ಅವರು ಸಂದೇಶ ನೀಡಿ, ಮದರ್‌ ತೆರೇಸಾ ಅವರದು ಅಸಾಮಾನ್ಯ ವ್ಯಕ್ತಿತ್ವ. ಅವರ ಸೇವೆ ವಿಶಿಷ್ಟವಾದುದು. ಅವರು ಸೇವೆಯ ಪ್ರತಿ ರೂಪ. ಅವರ ಅಸಾಮಾನ್ಯ ಬದುಕು ಅವರನ್ನು ಸಂತ ಪದವಿಗೇರಿಸಿದೆ. ತನ್ನ ಜೀವನವನ್ನು ಸಂಪೂರ್ಣವಾಗಿ ಪರರ ಸೇವೆಗೆ ಮುಡಿಪಾಗಿಟ್ಟು ಯೇಸು ಕ್ರಿಸ್ತರ ಬೋಧನೆಗಳನ್ನು ಅಕ್ಷರಶಃ ಪಾಲಿಸಿ ಅನುಸರಣೆ ಮಾಡಿ ಅವರಿಗೆ ಸಾಕ್ಷಿಯಾಗಿದ್ದಾರೆ. ದೇವರ ಕರುಣೆಯನ್ನು ವಿಶೇಷವಾಗಿ ಪ್ರಕಟ ಪಡಿಸಿದ್ದಾರೆ ಎಂದು ಹೇಳಿದರು.

ಬಲಿಪೂಜೆಯ ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಚರ್ಚ್‌ ಸ್ಥಾಪಕ ವಂ| ಜಿ. ಡಬುÉ Â. ವಾಸ್‌ ಅವರನ್ನು ಸಮ್ಮಾನಿಸಲಾಯಿತು. ಧರ್ಮಾಧ್ಯಕ್ಷ ಹುದ್ದೆಯ 20 ವರ್ಷ, ಧರ್ಮ ಗುರು ಸೇವೆಯ 50 ವರ್ಷ ಹಾಗೂ ಜೀವನದ 75 ಸಂವತ್ಸರಗಳನ್ನು ಪೂರ್ತಿ ಗೊಳಿಸಿದ ಬಿಷಪ್‌ ಅಲೋಶಿಯಸ್‌ ಪಾವ್‌É ಡಿ’ಸೋಜಾ ಅವರನ್ಮು ಚರ್ಚ್‌ ವತಿಯಿಂದ ಸಮ್ಮಾನಿಸಲಾಯಿತು.

ಸ್ಥಳೀಯ ಕಾರ್ಪೊರೇಟರ್‌ ಭಾಸ್ಕರ್‌ ಕೆ., ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್‌ ಕ್ಯಾಸ್ತಲಿನೊ ಅವರು ಅತಿಥಿಗಳಾಗಿದ್ದರು.

ಚರ್ಚ್‌ನ ಧರ್ಮಗುರು ಫಾ| ವಿನ್ಸೆಂಟ್‌ ವಿಕ್ಟರ್‌ ಮಿನೇಜಸ್‌ ಸ್ವಾಗತಿಸಿದರು. ಉಪಾಧ್ಯಕ್ಷ ವಿಲಿಯಂ ಲೋಬೊ ಮತ್ತು ಕಾರ್ಯದರ್ಶಿ ವೀಣಾ ಲೋಬೊ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English