ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ವಿಸರ್ಜನಾ ಮೆರವಣಿಗೆ ಬುಧವಾರ ಸಂಜೆ ಸಂಭ್ರಮದದಿಂದ ನಡೆಯಿತು.
ಮೂರು ದಿನಗಳ ಕಾಲ ಶ್ರೀ ಕ್ಷೇತ್ರದ ವಠಾರದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನನ್ನು ಆಕರ್ಷಕ ಮೆರವಣಿಗೆ ಮೂಲಕ ಕುಂಬಳೆ ಪೇಟೆ, ಕೃಷ್ಣ ನಗರ ಶಾಂತಿಪಳ್ಳ ದಾರಿಯಾಗಿ ಕುಂಟಗೇರಡ್ಕದ ಮೂಲಕ ಮರಳಿ ಪೇಟೆಗೆ ಬಂದು ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ರೈಲು ನಿಲ್ದಾಣದ ಮೂಲಕ ಸಾಗಿ ಕಡಲಿನಲ್ಲಿ ವಿಸರ್ಜಿಸಲಾಯಿತು.
ಪೇಟೆ ಸಹಿತ ಅನೇಕ ಕಡೆಗಳಲ್ಲಿ ಭಕ್ತಾದಿಗಳಿಂದ ವಿಶೇಷ ಪೂಜೆ ನಡೆಸಲಾಯಿತು. ಟ್ಯಾಬ್ಲೋ, ಚೆಂಡೆ ವಾದನ, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್ ಗಮನ ಸೆಳೆಯಿತು.
Click this button or press Ctrl+G to toggle between Kannada and English