ಬಂಟ್ವಾಳ: ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಇವರ ವತಿಯಿಂದ ನವೀಕರಣಗೊಳಿಸಿದ ಕೈಕುಂಜೆ ಅಂಗನವಾಡಿ ಕೇಂದ್ರವನ್ನು ರೋಟರಿಯ ಹಿರಿಯ ಸದಸ್ಯ ರಾಜೇಶ್ ಎಲ್.ನಾಯಕ್ ಹಸ್ತಾಂತರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಸಮಾಜ ಸೇವೆಯ ಮೂಲಕ ರೋಟರಿಕ್ಲಬ್ ಸಾರ್ಥಕತೆಯನ್ನು ಪಡೆದಿದೆ.
ಪುರಸಭೆ ಅಂ.ಕೇಂದ್ರಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದೆ,ಇನ್ನೂ ಮುಂದೆಯೂ ನೀಡಲಿದೆ ಎಂದರು. ಸ್ಫರ್ಧಾತ್ಮಕ ಯುಗದಲ್ಲಿ ಅಂ.ಕೇಂದ್ರಗಳು ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದ್ದರೆ ಉತ್ತಮ. ಇಂಗ್ಲೀಷ್ ಬಗ್ಗೆ ಅಭಿಮಾನ ಇರಲಿ ಅಂಧಾಭಿಮಾನ ಬೇಡ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ ಅವರು ಅಂಗನವಾಡಿಯ ಬಗ್ಗೆ ಕೀಳರಿಮೆ ಬೇಡ ದೈಹಿಕ, ಮಾನಸಿಕ, ಆರೋಗ್ಯವಂತವಾಗಿ ಮಗು ಬೆಳೆಯಲು ಅಂಗನವಾಡಿಯ ಶಿಕ್ಷಣ ಅಗತ್ಯ ಎಂದರು.
ವೇದಿಕೆಯಲ್ಲಿ ಪುರಸಭೆ ಸದಸ್ಯೆ ಸುಗುಣ ಕಿಣಿ, ರೋಟರಿ ಕಾರ್ಯದರ್ಶಿ ಮಹಮ್ಮದ್ ವಳವೂರು, ಕೋಶಾಧಿಕಾರಿ ಸದಾಶಿವ ಬಾಳಿಗಾ, ನಿಕಟಪೂರ್ವ ಅಧ್ಯಕ್ಷ ಕರುಣಾಕರ ರೈ, ಸದಸ್ಯರಾದ ಭಾನುಶಂಕರ ಬನ್ನಿಂತ್ತಾಯ, ಧನಂಜಯ ಬಾಳಿಗಾ, ವಲ್ಲಭೇಶ ಶೆಣೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಮತ್ತು ಸಿಡಿಪಿಓ ಮಲ್ಲಿಕಾ ಉಪಸ್ಥಿತರಿದ್ದರು.
ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿ, ಅಂ. ಸಹಾಯಕಿ ಸವಿತಾ ವಂದಿಸಿದರು. ಅಂ. ಕಾರ್ಯಕರ್ತೆ ವಾಣಿ ಕಾರ‍್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English