ನವದೆಹಲಿ: ಸುಸ್ತಿ ಸಾಲಗಾರನ ಹಣೆಪಟ್ಟಿ ಹೊತ್ತು ವಿದೇಶದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಬರಲು ಸಿದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಭಾರತೀಯ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್ ಅಮಾನತು ಮಾಡಿದ್ದರಿಂದ ನನಗೆ ಸ್ವದೇಶಕ್ಕೆ ಹಿಂದಿರಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಾವಿರಾರು ಕೋಟಿ ಸಾಲ ಪಡೆದು ವಿದೇಶದಲ್ಲಿ ನೆಲಿಸಿರುವ ಉದ್ಯಮಿ ವಿಜಯ ಮಲ್ಯಗೆ ಖುದ್ದಾಗಿ ಹಾಜರಾಗುವಂತೆ ದೆಹಲಿಯ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಸೂಚಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಮಾಹಿತಿ ನೀಡಿರುವ ಮಲ್ಯ ನಾನು ಭಾರತಕ್ಕೆ ಬರಬೇಕು ಎಂದು ಬಯಸಿದ್ದೇನೆ. ಆದರೆ ಏಪ್ರಿಲ್ 23, 2016ರಂದು ಭಾರತೀಯ ಅಧಿಕಾರಿಗಳು ನನ್ನ ಪಾಸ್ ಪೋರ್ಟ್ ಅಮಾನತುಗೊಳಿಸಿದ್ದಾರೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಕಾಲವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಮಲ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು ಆಗಿದ್ದಾಗಿನಿಂದಲೂ ಅವರಿಗೆ ನೀಡಿರುವ ಸಮನ್ಸ್ ಉಲ್ಲಂಘನೆ ಮಾಡಿರುವ ಮಲ್ಯ ಈ ಸಲವು ಅದರ ಉಲ್ಲಂಘನೆ ಮಾಡಿ ಸಮಯವಕಾಶ ಕೇಳುತ್ತಿದ್ದಾರೆಂದು ಜಾರಿ ನಿರ್ದೇಶನಾಲಯ ವಾದಿಸಿದೆ. ಇದರಿಂದ ಪ್ರಕರಣದ ವಿಚಾರಣೆ ಅಕ್ಟೋಬರ್ 4ಕ್ಕೆ ಮುಂದೂಡಿಕೆಯಾಗಿದೆ.
Click this button or press Ctrl+G to toggle between Kannada and English