ಬಂಗಾರಪ್ಪನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ: ಜನಾರ್ದನ ಪೂಜಾರಿ

10:54 AM, Tuesday, September 13th, 2016
Share
1 Star2 Stars3 Stars4 Stars5 Stars
(No Ratings Yet)
Loading...

janardhan-pujaryಮಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ನಡೆದ ಸರ್ವಪಕ್ಷ ಸಭೆಯ ನಿರ್ಧಾರವನ್ನು ಪಾಲಿಸಲು ಮುಖ್ಯಮಂತ್ರಿಯವರು ಬದ್ಧತೆ ತೋರಿಸಿಲ್ಲ. 24 ಗಂಟೆಯೊಳಗೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ರಾಜ್ಯದ ಜನರಿಗೆ ತಮ್ಮ ನಿರ್ಧಾರ ಸ್ಪಷ್ಟಪಡಿಸಬೇಕು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಿರಿ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಾಕೀತು ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರೂ ಈವರೆಗೆ ಮಾತಾಡಿಲ್ಲ. ರಾಜ್ಯದ ಜನರ ಭಾವನೆ ಅರಿಯದಿದ್ದರೆ ಅವರೂ ಆ ಸ್ಥಾನಕ್ಕೆ ಅನರ್ಹ. ಉಸ್ತುವಾರಿ ಮುಖ್ಯವೇ, ರಾಜ್ಯದ ಜನರು ಮುಖ್ಯವೇ ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್‌ಗೆ ಪೂಜಾರಿ ಉತ್ತರ ಕೊಡುತ್ತಾರೆ. ಹೈಕಮಾಂಡ್ ನನಗೆ ನೋಟಿಸ್ ಕೊಡಲಿ. ಆಗ ಸರಿಯಾದ ಉತ್ತರ ಕೊಡುತ್ತೇನೆ. ಯಾವ ಶಿಕ್ಷೆಯನ್ನು ಅನುಭವಿಸಲು ಕೂಡಾ ನಾನು ಸಿದ್ಧ ಎಂದು ಹೇಳಿದರು.

ಉಚ್ಛಾಟನೆ ಬಳಿಕ ಅವರ ದಾರಿ ಮುಗಿಯುತ್ತದೆ. ನಾನು ಪ್ರತಿದಿನ ಪ್ರೆಸ್‌‌‌ಮೀಟ್ ಮಾಡುತ್ತೇನೆ. ಅವರ ಮನಸ್ಸಿನಲ್ಲಿ ನಾನು ಪಕ್ಷದ ವಿರುದ್ಧ ಎಂಬ ಭಾವನೆ ಇದೆ. ಆದರೆ, ನಾನು ಪಕ್ಷದ ಪರ. ಆಸ್ಕರ್, ಮೊಯ್ಲಿ, ವಿಶ್ವನಾಥ್, ಧರಂಸಿಂಗ್ ಸೇರಿ ನಾವೆಲ್ಲಾ ಪಕ್ಷ ಕಟ್ಟಿದವರು. ಖರ್ಗೆ ಅವರೂ ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದರು ಎಂಬುದನ್ನು ನೆನಪಿಸಿಕೊಂಡರು.

ಕಾವೇರಿ ವಿವಾದ ಬಗೆಹರಿಸುವಲ್ಲಿ ತಜ್ಞರ ಶಕ್ತಿ ಕಡಿಮೆಯಾಗಿದೆ ಎಂಬ ಕಾವೇರಿ ಹೋರಾಟ ತಜ್ಞರ ಸಮಿತಿ ಅಧ್ಯಕ್ಷ ಶಶಿಶೇಖರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಅವರು 1981ರಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಮಿಳುನಾಡಿನ ಮೇಲೆ ಮೋಹ ಏಕೆ ಎಂದು ಪ್ರಶ್ನಿಸಿದರು.

janardhan-pujaryಕಾವೇರಿ ವಿಚಾರದಲ್ಲಿ ದೇವೇಗೌಡರು ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಿದ್ದಾರೆ. ಜೆಡಿಎಸ್ ನಾಯಕರ ಸರ್ಕಸ್‌ ರಾಜ್ಯದ ಜನ ನೋಡುತ್ತಿದ್ದಾರೆ. ಅವರಿಗೆ ಬದ್ಧತೆ ಇದ್ದರೆ ರಾಜ್ಯದ ಎಲ್ಲ ಎಂಪಿಗಳು, ಪಾಲಿಕೆ ಕಾರ್ಪೋರೇಟರ್‌ಗಳು ರಾಜೀನಾಮೆ ನೀಡಲಿ. ಉಳಿದವರ ರಾಜೀನಾಮೆಗೂ ಆಗ್ರಹಿಸಲಿ. ಆಗ ಸಮಸ್ಯೆ ಬಗೆಹರಿಸುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಕಾವೇರಿ ವಿಚಾರದಲ್ಲಿ ರಾಜ್ಯದ ಜೊತೆ ಕೇಂದ್ರ ಸರ್ಕಾರವೂ ವಿಫಲವಾಗಿದೆ. ಪ್ರಧಾನಿ ಮೋದಿ ಅವರು ಮೂರು ರಾಜ್ಯಗಳ ಸಿಎಂಗಳ ಸಭೆ ಕರೆಯಬೇಕಿತ್ತು. ಯಡಿಯೂರಪ್ಪ ಕೂಡ ಕೇಂದ್ರದ ಮೇಲೆ ಒತ್ತಡ ಹಾಕಬಹುದಿತ್ತು. ಆದರೆ ಆ ಧೈರ್ಯ ಎಲ್ಲಿಗೆ ಹೋಯಿತು ಎಂದು ಪೂಜಾರಿ ಪ್ರಶ್ನಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English