ಪುತ್ತೂರು : ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಹುಟ್ಟೂರು ಪಡುಮಲೆ ಕ್ಷೇತ್ರದಲ್ಲಿ ತಾಯಿ, ನಾಟಿ ವೈದ್ಯೆ ದೇಯಿ ಬೈದೇತಿ ಹೆಸರಿನಲ್ಲಿ 9 ಎಕ್ರೆ ವಿಸ್ತಾರ ಪ್ರದೇಶದ ಔಷಧ ವನ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಇನ್ನಷ್ಟು ಆವಶ್ಯಕತೆಗಳನ್ನು ಸೇರಿಸಿಕೊಂಡು ರಾಜ್ಯದ ಪ್ರಸಿದ್ಧ ಮತ್ತು ಮಾದರಿ ಔಷಧ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ರಾಜ್ಯ ಅರಣ್ಯ ಇಲಾಖೆ ವತಿಯಿಂದ 54 ಲಕ್ಷ ರೂ. ಅನುದಾನದಲ್ಲಿ ಪಡುಮಲೆ ಕ್ಷೇತ್ರದ ಮುಡುಪಿನಡ್ಕದಲ್ಲಿ ನಿರ್ಮಿಸಲಾದ ದೇಯಿ ಬೈದೇತಿ ಔಷಧ ವನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ತುಳುನಾಡಿಗೆ ವೀರ ಪುರುಷರಾದ ಕೋಟಿ-ಚೆನ್ನಯರ ಇತಿಹಾಸ ಉಳಿಯಬೇಕು, ಜನರು ಅರಿಯಬೇಕು ಮತ್ತು ನಶಿಸಿ ಹೋಗುತ್ತಿರುವ ಔಷಧೀಯ ಸಸ್ಯ ಸಂಕುಲವನ್ನು ಮತ್ತೆ ಬಳಕೆ ರೂಢೀಕರಿಸುವ ಪ್ರಯತ್ನದೊಂದಿಗೆ ಈ ವನ ನಿರ್ಮಾಣ ಮಾಡಲಾಗಿದೆ ಎಂದರು.
ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ನಾಟಿ ವೈದ್ಯ ಪದ್ಧತಿ ಹಾಗೂ ದೇಯಿ ಬೈದೇತಿಯ ಹೆಸರು ಉಳಿಸುವ ಕೆಲಸ ಇಲ್ಲಿ ಆಗಿದೆ ಎಂದರು.
ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಬಿಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ತಾ. ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ತಹಶೀಲ್ದಾರ್ ಪುಟ್ಟಶೆಟ್ಟಿ, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಾಯ, ಪುತ್ತೂರು ನಗರ ಸಭಾ ಅಧ್ಯಕ್ಷೆ ಜಯಂತಿ ಬಲಾ°ಡು, ತಾ. ಪಂ. ಸದಸ್ಯರಾದ ರಾಧಾಕೃಷ್ಣ ಬೋರ್ಕರ್, ಉಷಾ ಅಂಚನ್, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕಳ, ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ, ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಂದರ ಶೆಟ್ಟಿ, ಪುತ್ತೂರು ವಲಯಾರಣ್ಯಾಧಿಕಾರಿ ಕಾರ್ಯಪ್ಪ, ಉಪವಲಯ ಅರಣ್ಯಾಧಿಕಾರಿ ಕೃಷ್ಣಪ್ಪ, ಕೆ. ನಾರಾಯಣ ಸೇರಿದಂತೆ 8 ವಲಯಾರಣ್ಯಾಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಸ್ವಾಗತಿಸಿ, ಸಂತೋಷ್ ಕೆ. ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English