ಕಾಳುಮೆಣಸಿನ ಪಾರಂಪರಿಕ-ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯತ್ತ ಕ್ಯಾಂಪ್ಕೋ ಹೆಜ್ಜೆ

12:06 PM, Thursday, September 15th, 2016
Share
1 Star2 Stars3 Stars4 Stars5 Stars
(No Ratings Yet)
Loading...

campcoಮಂಗಳೂರು: ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇದೀಗ ಕಾಳುಮೆಣಸು ಮಾರುಕಟ್ಟೆ ಪ್ರವೇಶಿಸಲು ಉದ್ದೇಶಿಸಿದೆ. ಕಾಳುಮೆಣಸಿನ ಪಾರಂಪರಿಕ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯತ್ತ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ನೂತನ ಉತ್ಪನ್ನ `ಡಾರ್ಕ್‌ ಟ್ಯಾನ್’ ಸತ್ವಯುತ ಚಾಕೊಲೇಟ್‌ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತರ ಭಾರತದಲ್ಲಿ ಕಾಳುಮೆಣಸಿನ ಉತ್ಪನ್ನಗಳಿಗೆ ಸಿಗಬಹುದಾದ ಮಾರುಕಟ್ಟೆ ಮತ್ತಿತರ ವಿಚಾರಗಳ ಕುರಿತು ಈಗಾಗಲೇ ಅಧ್ಯಯನ ನಡೆಸಲಾಗಿದೆ. ಇನ್ನು ಮುಂದೆ 30 ಮಂದಿ ಅಧಿಕಾರಿಗಳ ತಂಡವನ್ನು ಕೊಚ್ಚಿಗೆ ತರಬೇತಿಗಾಗಿ ಕಳುಹಿಸಲಾಗುವುದು. ಬಳಿಕ ಕಾಳುಮೆಣಸು ಪುಡಿ, ಕಾಳುಮೆಣಸು ತೈಲ ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸತೀಶ್ಚಂದ್ರ ತಿಳಿಸಿದರು.

ಎಫ್ಎಸ್ಎಸ್ಸಿ ನಿಬಂಧನೆಗೆ ಅನುಗುಣವಾಗಿ ಚಾಕೊಲೇಟ್‌ ಕಾರ್ಖಾನೆಯ ವ್ಯವಸ್ಥೆಗಳನ್ನು ಆಧುನಿಕರಣಗೊಳಿಸಲಾಗುತ್ತಿದೆ. ಇದೇ ಉದ್ದೇಶಕ್ಕಾಗಿ 11.50 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಎಲ್ಲ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ `ಡಿಜಿಟಲ್ ಕ್ಯಾಂಪ್ಕೋ’ ಆಗಿ ಹೊರಹೊಮ್ಮುವ ಉದ್ದೇಶವನ್ನೂ ಹೊಂದಲಾಗಿದೆ ಎಂದು ಸತೀಶ್ಚಂದ್ರ ಮಾಹಿತಿ ನೀಡಿದರು.

ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಚೌಡಪ್ಪ, ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ., ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕ ಶಂಕರನಾರಾಯಣ ಮತ್ತಿತರರು ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English