ವಿವಿ ಕ್ಯಾಂಪಸ್‌ನ ವಿಜ್ಞಾನ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿಗೆ ಜಾಮೀನು

11:25 AM, Saturday, September 17th, 2016
Share
1 Star2 Stars3 Stars4 Stars5 Stars
(No Ratings Yet)
Loading...

santhoshಮಂಗಳೂರು: ಮಂಗಳೂರು ವಿವಿ ಕ್ಯಾಂಪಸ್‌ನ ವಿಜ್ಞಾನ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿಗೆ ಜಾಮೀನು ಸಿಕ್ಕಿದೆ. ಬುಧವಾರ ಕೊಣಾಜೆ ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿದ್ದರು.

ಸುಳ್ಯ ತಾಲೂಕಿನ ಎಡಮಂಗಲ ಮುರೋಳಿ ನಿವಾಸಿ ಎಂ.ಸಂತೋಷ್ (22) ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಸಂತೋಷ್ ಸಾಗರ ಪ್ರಾಣಿವಿಜ್ಞಾನ ವಿಭಾಗದ ದ್ವಿತೀಯ ಎಂ.ಎಸ್‌ಸಿ ವಿದ್ಯಾರ್ಥಿ. ತಾನೇ ಈ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದ.

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಸೆ.1ರಂದು ವಿವಿ ಕುಲಸಚಿವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬುಧವಾರ ಆರೋಪಿ ಸಂತೋಷ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಕೊಣಾಜೆ ಪೊಲೀಸರು 82 ಶಂಕಿತರನ್ನು ವಿಚಾರಣೆ ನಡೆಸಿದ್ದರು. ಹಾಸ್ಟೆಲ್‌ನಲ್ಲಿ ನೆಲೆಸಿದ್ದ ಸಂತೋಷ್ ಈತ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಬೇರೆ ಕಡೆ ತೆರಳಿದ್ದ. ಒಂದು ವಾರದ ಬಳಿಕ ಪುನಃ ವಾಪಸ್ ಬಂದಿದ್ದ. ಆದರೆ, ಕೇವಲ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ವಿವಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಗೆ ಜಾಮೀನು ಸಿಕ್ಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English