ಉಡುಪಿ ಜಿಲ್ಲೆಯ ಡಾ.ಹರೀಶ್ ಹಂದೆ ಸೇರಿದಂತೆ ಇಬ್ಬರು ಭಾರತೀಯರಿಗೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ

4:53 PM, Thursday, July 28th, 2011
Share
1 Star2 Stars3 Stars4 Stars5 Stars
(No Ratings Yet)
Loading...

Harish-Hande-Neelima-Misra

ಬೆಂಗಳೂರು : ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಈ ಬಾರಿ ಇಬ್ಬರು ಭಾರತೀಯರಿಗೆ ಸಿಕ್ಕಿದೆ. ಉಡುಪಿ ಜಿಲ್ಲೆಯ ಡಾ.ಹರೀಶ್ ಹಂದೆ ಹಾಗೂ ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಈ ಭಾರಿ ಪಡೆದ ಭಾರತೀಯರು. ಒಟ್ಟು ಆರು ಮಂದಿಗೆ ಈ ಪ್ರಶಸ್ತಿ ನೀಡಲಾಗಿದೆ.

ಡಾ.ಹರೀಶ್ ಹಂದೆ ಮೂಲತ: ಉಡುಪಿ ಜಿಲ್ಲೆಯ ಕೋಟದ ಹಂದೆ ಕುಟುಂಬಕ್ಕೆ ಸೇರಿದವರು. ಸೌರ ವಿದ್ಯುತನ್ನು ಕರ್ನಾಟಕ ರಾಜ್ಯದ ಹಳ್ಳಿಹಳ್ಳಿಗೂ ಕೊಂಡೊಯ್ದು, ಸುಮಾರು ಒಂದು ಲಕ್ಷ ಬಡ ಕುಟುಂಬಗಳ ಗುಡಿಸಲುಗಳಲ್ಲಿ ಸೌರ ಶಕ್ತಿಯ ಮೂಲಕ ಬೆಳಕನ್ನು ನೀಡಿದ್ದಾರೆ. ನಿಸ್ವಾರ್ಥ ಮನೋಭಾವದಿಂದ ಸೌರಶಕ್ತಿಯ ಬೆಳಕನ್ನು ಗ್ರಾಮೀಣ ಪ್ರದೇಶಗಳಲ್ಲಿ ಪಸರಿಸಿದ ಕಾರಣಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿ ಹರೀಶ್ ಹಂದೆ, ಸುಬ್ರಹ್ಮಣ್ಯ ಹಂದೆ ಹಾಗೂ ಸುಶೀಲಾ ಹಂದೆಯವರ ಪುತ್ರ. ಒಡಿಶಾದ ರೂರ್ಕೆಲದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಪ್ರತಿಷ್ಠಿತ ಐಐಟಿ ಖರಗಪುರದಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆರು. ಮುಂದೆ ಅಮೆರಿಕದ ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಉನ್ನತ ಜ್ಞಾನ ಸಂಪಾದಿಸಿ ಸೌರ ವಿದ್ಯುತ್ ನತ್ತ ಆಕರ್ಷಿತರಾದರು.

1995ರಲ್ಲಿ ನೆವಿಲ್ಲೆ ವಿಲಿಯಮ್ಸ್‌ರೊಂದಿಗೆ ಸೇರಿ ಸೆಲ್ಕೋ-ಇಂಡಿಯಾ ಎಂಬ ಕಂಪೆನಿಯನ್ನು ಪ್ರಾರಂಭಿಸಿದರು. ಇಂದು ರಾಜ್ಯಾದ್ಯಂತ 1,00,000 ಮನೆಗಳನ್ನು ಸೌರಶಕ್ತಿಯ ಮೂಲಕ ಬೆಳಗಿಸಿದೆ.

ಡಾ.ಹಂದೆಯವರಿಗೆ 2005ರಲ್ಲಿ ಪ್ರಿನ್ಸ್ ಚಾರ್ಲ್ಸ್‌ರಿಂದ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ದೊರಕಿದೆ. ಅಲ್ಲದೇ ಅದೇ ವರ್ಷ ಅಮೆರಿಕದ ‘ಅಸ್ಡನ್ ಅವಾರ್ಡ್’ ಹಾಗೂ ‘ಟೆಕ್ ಮ್ಯೂಸಿಯಂ ಅವಾರ್ಡ್’ ದೊರಕಿವೆ. 2007ರಲ್ಲಿ ಸೆಲ್ಕೊಗೆ ಅಸ್ಡನ್ ಅವಾರ್ಡ್ ಸಿಕ್ಕಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English