ಜನಾರ್ದನ ಪೂಜಾರಿ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು

12:39 PM, Monday, September 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

dinesh-gunduraoಉಡುಪಿ: ‘ಕರ್ನಾಟಕ ಸರ್ಕಾರದ ವಿರುದ್ಧ ಪದೇ ಪದೇ ಅನಾವಶ್ಯಕ ಟೀಕೆ ಮಾಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಡುಪಿಯಲ್ಲಿ ಭಾನುವಾರ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ‘ಸರ್ಕಾರದ ವಿರುದ್ಧ ಅವರು ಅನಾವಶ್ಯಕವಾಗಿ ಪದೇ ಪದೇ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ, ಅವರ ಟೀಕೆಗಳಿಗೆ ಆಧಾರವಿಲ್ಲ. ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಹಿರಿಯ ನಾಯಕರ ಹೇಳಿಕೆ ಸರ್ಕಾರ ಹಾಗೂ ಪಕ್ಷಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಎಐಸಿಸಿಗೆ ದೂರು ನೀಡಲಾಗಿದೆ. ಅದರಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, ‘ಜಾರ್ಜ್ ಅವರು ರಾಜೀನಾಮೆ ಕೊಡುವಂತಹ ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ, ರಾಜೀನಾಮೆ ನೀಡುವ ಅಗತ್ಯವೂ ಇರಲಿಲ್ಲ’ ಎಂದು ಹೇಳಿದರು.

‘ಪ್ರತಿಪಕ್ಷ ಬಿಜೆಪಿಯೂ ಜಾರ್ಜ್ ಅವರ ಮೇಲೆ ವಿನಾ ಕಾರಣ ಆರೋಪಗಳನ್ನು ಮಾಡಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿತು. ಕೆ.ಜೆ.ಜಾರ್ಜ್ ಅವರು ಸಂಪುಟ ಸೇರುವ ಕುರಿತಂತೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.
ಜನಾರ್ದನ ಪೂಜಾರಿ ಅವರ ಕೆಲವು ಹೇಳಿಕೆಗಳು * ‘ಕರಾವಳಿಯವರೆ ಆಗಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಡಿ.ವಿ.ಸದಾನಂದ ಗೌಡರ ಒಳಸಂಚಿಗೆ ಬಲಿಯಾಗಿ ಅಪರಾಧ ಮಾಡುತ್ತಿದ್ದಾರೆ. ಇವರು ಆಡುತ್ತಿರುವ ಆಟಕ್ಕೆ ಇವರಿಗೆ ‘ಖೇಲ್ ರತ್ನ’ ಪ್ರಶಸ್ತಿ ನೀಡಬೇಕು. ಪ್ರಶಸ್ತಿ ನೀಡದಿದ್ದರೆ ಅಪರಾಧವಾದಿತು’ * “ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೈಕಮಾಂಡ್ ಮುಂದೆ ಆಸ್ಕರ್, ಖರ್ಗೆ, ಪರಮೇಶ್ವರ್ ಅವರ ಹೆಸರಿದೆ”

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English