ಮಲ್ಪೆ ಬೀಚ್‌ ಸಮಗ್ರ ಅಭಿವೃದ್ಧಿಗೆ ಒತ್ತು : ಸಚಿವ ಪ್ರಮೋದ್‌ ಮಧ್ವರಾಜ್‌

12:49 PM, Monday, September 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

malpe-beachಮಲ್ಪೆ: ಕಳೆದ 3 ವರ್ಷದ ಅವಧಿಯಲ್ಲಿ ಮಲ್ಪೆ ಬೀಚ್‌ನ ಅಭಿವೃದ್ಧಿಗೆ ವಿವಿಧ ಇಲಾಖೆ ಮತ್ತು ವಿವಿಧ ಮೂಲಗಳಿಂದ 10.42 ಕೋ. ರೂ. ಅನುದಾನ ತರಿಸಿ ಅಭಿವೃದ್ಧಿ ಕೆಲಸಗಳು ನಡೆಸಲಾಗಿದ್ದು, ಮುಂದೆ ಇನ್ನಷ್ಟು ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೀನುಗಾರಿಕೆೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ಶನಿವಾರ ಮಲ್ಪೆ ಬೀಚ್‌ನಲ್ಲಿ ಬೀಚ್‌ ಸ್ವತ್ಛತಾ ಯಂತ್ರ ಉದ್ಘಾಟಿಸಿ ಮಾತನಾಡಿದರು. ಮಲ್ಪೆ, ಪಡುಕರೆಗೆ ಸೇತುವೆ ನಿರ್ಮಾಣಗೊಳ್ಳುತ್ತಿರುವುದರಿಂದ ಬೀಚ್‌ನ್ನು ಪಡುಕರೆಯ ವರೆಗೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸೈಂಟ್‌ಮೇರಿ ದ್ವೀಪದಲ್ಲಿ ಪ್ರವಾಸಿಗರಿಗೆ ಕಾಯಲು ವೈಟಿಂಗ್‌ ಲಾಂಚ್‌ ಮತ್ತು 3 ಕೋ. ರೂ. ವೆಚ್ಚದಲ್ಲಿ ಜಟ್ಟಿ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮಲ್ಪೆ ಬೀಚ್‌ ಮತ್ತು ಮುರ್ಡೇಶ್ವರ ಬೀಚ್‌ಗೆ ತಲಾ 1 ಕೋಟಿ ರೂ. ವೆಚ್ಚದಲ್ಲಿ ವಾಟರ್‌ ನ್ಪೋರ್ಟ್ಸ್, ಮಲ್ಪೆ ಬೀಚ್‌ನಲ್ಲಿ 15 ಹೊಸ ಹಟ್‌ ನಿರ್ಮಾಣ, ಉತ್ತಮವಾದ ವೆಲ್‌ಕಂ ಆರ್ಚ್‌, ಜೆಸ್ಕಿ ಮತ್ತು ಪವರ್‌ ಎಟ್‌ನ್ನು ತರಿಸಲಾಗುತ್ತದೆ. ಮಲ್ಪೆ ಹನುಮಾನ್‌ ನಗರದ ಬೀಚ್‌ಗೆ ಸಿಮೆಂಟ್‌ ಚಯರ್‌ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟೇಶ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಸದಸ್ಯರಾದ ಪ್ರಶಾಂತ್‌ ಅಮೀನ್‌, ನಾರಾಯಣ ಪಿ. ಕುಂದರ್‌, ಹಾರ್ಮಿಸ್‌ ನೊರೊನ್ಹಾ, ಗಣೇಶ್‌ ನೆರ್ಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಉದ್ಯಮಿ ಮನೋಹರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಗರಸಭಾ ಆಯುಕ್ತ ಮಂಜು ನಾಥಯ್ಯ ಸ್ವಾಗತಿಸಿ, ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English