ನ್ಯೂಯಾರ್ಕ್: ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯಲ್ಲಿ ಉಗ್ರರು ಅಟ್ಟಹಾಸಗೈದ ಘಟನೆ ನಡೆದ ಬೆನ್ನಲ್ಲೇ ಸುದ್ದಿಗೋಷ್ಠಿಯಿಂದ ಭಾರತದ (ಎನ್ ಡಿಟಿವಿ) ಪತ್ರಕರ್ತೆಯನ್ನು ಪಾಕ್ ಅಧಿಕಾರಿ ಹೊರಗಟ್ಟಿದ ಘಟನೆ ಸೋಮವಾರ ನ್ಯೂಯಾರ್ಕ್ ನಲ್ಲಿ ನಡೆದಿದೆ.
ನ್ಯೂಯಾರ್ಕ್ ನ ರೂಸ್ ವೆಲ್ಟ್ ಹೋಟೆಲ್ ನಲ್ಲಿ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಎಜಾಜ್ ಅಹ್ಮದ್ ಚೌಧರಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಇಸ್ ಇಂಡಿಯನ್ ಕೋ ನಿಕಾಲೋ(ಈ ಭಾರತೀಯ ಪತ್ರಕರ್ತೆಯನ್ನು ಹೊರಗೆ ಕಳುಹಿಸಿ) ಎಂದು ಎಜಾಜ್ ರೇಗಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ಪ್ರೆಸ್ ಮೀಟ್ ನಲ್ಲಿ ಎನ್ ಡಿಟಿವಿಯ ನಮ್ರತಾ ಬ್ರಾರ್ ಅವರನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಪತ್ರಿಕಾಗೋಷ್ಠಿಯಲ್ಲಿ ಒಬ್ಬನೇ ಒಬ್ಬ ಭಾರತೀಯ ಪತ್ರಕರ್ತ ಇರದಂತೆ ನೋಡಿಕೊಳ್ಳಲಾಗಿದೆಯಂತೆ!
ಭಾನುವಾರ ಜಮ್ಮು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿ ಕುರಿತ ಪ್ರಶ್ನೆ ಕೇಳುತ್ತಾರೆ ಎಂಬ ಭಯದಿಂದ ಪಾಕಿಸ್ತಾನಿ ಅಧಿಕಾರಿಗಳು ಈ ರೀತಿ ನಡೆದುಕೊಂಡಿರುವುದಾಗಿ ಎನ್ ಡಿಟಿವಿ ವರದಿ ವಿವರಿಸಿದೆ.
Click this button or press Ctrl+G to toggle between Kannada and English