ಬಾಳಿಗಾ ಕೊಲೆ ಪ್ರಕರಣ: ಜಾಮೀನು ಪಡೆದಿದ್ದ ನರೇಶ್ ಶೆಣೈ ಬಿಡುಗಡೆ

4:19 PM, Tuesday, September 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

naresh-shenoyಮಂಗಳೂರು: ನಗರದ ಆರ್.ಟಿ.ಐ ಕಾರ್ಯಕರ್ತ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಬಿಡುಗಡೆಗೊಂಡಿದ್ದಾರೆ.

ಶನಿವಾರ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜೈಲು ಅಧೀಕ್ಷಕರಿಗೆ ಬಿಡುಗಡೆಯ ಆದೇಶ ಪತ್ರ ತಲುಪಿರಲಿಲ್ಲ ಆದ್ದರಿಂದ ತಡವಾಗಿತ್ತು. ಭಾನುವಾರ ರಜಾ ಕಾರಣ ಎರಡು ದಿನ ಜೈಲಿನಲ್ಲೇ ಇರುವಂತಾಯಿತು. ಅಂತಿಮವಾಗಿ ಸೋಮವಾರ ಸಂಜೆ ಬಿಡುಗಡೆಗೊಂಡರು.

ಜೈಲಿನಿಂದ ಹೊರಬಂದ ಅವರನ್ನು ಆಪ್ತರು ಕಾರಿನಲ್ಲಿ ಗುಪ್ತಸ್ಥಳಕ್ಕೆ ಕರೆದೊಯ್ದರು. ಈ ಸಂದರ್ಭ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಸಹಿತ ಪ್ರಮುಖ ಸಮಾಜದ ನಾಯಕರು ಜೈಲು ಆವರಣದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English