ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಕಚೆೇರಿ ಅಧೀಕ್ಷಕ,ನಿವೃತ್ತ ಶಿಕ್ಷಕ ಟಿ. ಆರ್. ನಾವಡ (85) (ಟಿ. ರಾಮಚಂದ್ರ ನಾವಡ) ಅಸೌಖ್ಯದಿಂದ ಸೆ.20ರಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಅವಿವಾಹಿತರಾಗಿದ್ದರು.
ತೆಂಕನಿಡಿಯೂರು ಗ್ರಾಮದ ಗರಡಿ ಮಜಲು ನಿವಾಸಿಯಾದ ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರೌಢಶಾಲೆಯಲ್ಲಿ (ಅಂದಿನ ಡಿ.ಕೆ.ವಿ. ಹೈಸ್ಕೂಲು) ಕೆಲವು ವರ್ಷಗಳಲ್ಲಿ ಪದವೀಧರ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 1966ರಲ್ಲಿ ಎಸ್‌ಡಿಎಂ ಕಾಲೇಜು ಆರಂಭವಾದಾಗ ಕಚೇರಿ ಪ್ರಬಂಧಕರಾಗಿ ಸೇರಿದ ಅವರು ಕಚೇರಿ ಅಧೀಕ್ಷಕರಾಗಿ ಮೂವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು.
ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿಯಾಗಿದ್ದ ಅವರು, ಪರೋಪಕಾರಿಯಾಗಿದ್ದು, ಸಂಕಷ್ಟದಲ್ಲಿರುವವರ ನೋವಿಗೆ ತಕ್ಷಣ ಸ್ಪಂದಿಸಿ ಸಹಾಯ ಮಾಡುವ ಉದಾರ ಹೃದಯ ಶ್ರೀಮಂತಿಕೆ ಹೊಂದಿದ್ದರು. ದೃಢ ಸಂಕಲ್ಪ, ಪ್ರಬಲ ಇಚ್ಛಾಶಕ್ತಿ, ಆತ್ಮವಿಶ್ವಾಸ, ಬದ್ಧತೆ ಕರ್ತವ್ಯ ಪ್ರಜ್ಞೆ, ದೂರಾಲೋಚನೆ, ಅಂದವಾದ ಕೈ ಬರಹ, ಒಂದೇ ಕೈಯಿಂದ ಬೆರಳಚ್ಚು ಯಂತ್ರದಲ್ಲಿ ಟೈಪ್ ಮಾಡುವುದು ಅವರ ವಿಶೇಷ ಗುಣಗಳು. ಯಕ್ಷಗಾನ, ಸಾಹಿತ್ಯ, ಕ್ರಿಕೆಟ್, ಬ್ಯಾಡ್ಮಿಂಟನ್, ಶಟ್ಲ ಆಡುವುದು ಅವರ ಮೆಚ್ಚಿನ ಹವ್ಯಾಸಗಳು. ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಮತ್ತು ಪ್ರಭುತ್ವ ಹೊಂದಿದ ಅವರು ಪತ್ರ ವ್ಯವಹಾರದ ಶೆ„ಲಿ ಮತ್ತು ವಿನ್ಯಾಸದಲ್ಲಿ ಪರಿಣತರಾಗಿದ್ದರು.
ಅವರ ನಿಧನಕ್ಕೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಸ್‌ಡಿಎಂ ಸಂಸ್ಥೆಗಳನ್ನು ಪ್ರಾರಂಭಿಸಿ ಬೆಳೆಸುವಾಗ ಒಳ್ಳೆಯ ಸೇವೆ ನೀಡಿದ್ದಾರೆ. ಬ್ರಹ್ಮಚಾರಿಯಾಗಿದ್ದ ನಾವಡರು ಸಂಸ್ಥೆಯೇ ತನ್ನ ಸರ್ವಸ್ವ ಎಂದು ಪರಿಗಣಿಸಿ ಉತ್ತಮ ಸೇವೆ ಮಾಡಿದ್ದಾರೆ. ಶಿಸ್ತು, ಸಮಯ ಪ್ರಜ್ಞೆ ಮತ್ತು ಸೇವೆಗೆ ಅವರು ಪ್ರಸಿದ್ಧರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಪಾಲಿಸುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೆಗ್ಗಡೆಯವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಶಾಸಕ ವಸಂತ ಬಂಗೇರ ಮತ್ತಿತರರು ಸ,ತಾಪ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English