ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ: ಬಸವರಾಜ ರಾಯರೆಡ್ಡಿ

12:10 PM, Wednesday, September 21st, 2016
Share
1 Star2 Stars3 Stars4 Stars5 Stars
(No Ratings Yet)
Loading...

basavaraja-raya-reddyಉಳ್ಳಾಲ: ದೇರಳಕಟ್ಟೆಯ ಯೇನಪೊಯ ವಿಶ್ವವಿದ್ಯಾನಿಲಯ, ಯೇನಪೊಯ ಫಿಸಿಯೋಥೆರಪಿ ಕಾಲೇಜು ಹಾಗೂ ಸೌತ್‌ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಸೋಮವಾರ ಯೇನಪೊಯ ಸಭಾಂಗಣದಲ್ಲಿ ನಡೆಯಿತು. ಶಿಬಿರ ಉದ್ಘಾಟಿಸಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ರಕ್ತದಾನ ಮಾಡುವ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬದುಕು ನೀಡುವುದು ಪುಣ್ಯದ ಕಾರ್ಯ. ಅಪಘಾತ ಹಾಗೂ ರೋಗಗಳ ಕಾರಣದಿಂದ ರಕ್ತಕ್ಕೆ ಬಹಳ ಬೇಡಿಕೆ ಇದೆ.

ರಕ್ತದಾನ ಒಂದು ಪವಿತ್ರ ಕಾರ್ಯವಾಗಿರುವುದರಿಂದ ರಕ್ತದಾನ ಶಿಬಿರಗಳ ಅಗತ್ಯತೆ ಬಹಳ ಇದೆ. ಈ ಹಿನ್ನೆಲೆಯಲ್ಲಿ ಯೇನಪೊಯ ವಿಶ್ವವಿದ್ಯಾಲಯದ ಸೇವೆ ಶ್ಲಾಘನಾರ್ಹ ಎಂದರು.

ಆಹಾರ ಹಾಗೂ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌, ಯೇನಪೊಯ ವಿಶ್ವವಿದ್ಯಾಲಯದ ಸಂಶೋಧನ ನಿರ್ದೇಶಕ ಫರ್ಹಾದ್‌ ಯೇನಪೊಯ, ಹಣಕಾಸು ಅಧಿಕಾರಿ ಮೊಹಮ್ಮದ್‌ ಬಾವ, ಕಣ್ಣೂರ್‌, ಕಲ್ಲಿಕೋಟೆ ವಿ.ವಿ. ವಿಶ್ರಾಂತ ಉಪ ಕುಲಪತಿ ಪ್ರೊ| ಅಬ್ದುಲ್‌ ರಹಿಮಾನ್‌, ಯೇನಪೊಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್‌. ಪದ್ಮಕುಮಾರ್‌, ಯೇನಪೊಯ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಪ್ರೊ| ಆಶಾ ಪಿ. ಶೆಟ್ಟಿ, ಉಪ ಕುಲಸಚಿವ ಡಾ| ಅಬ್ದುಲ್‌ ರಹಿಮಾನ್‌ ಮೊದಲಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ 100ಕ್ಕಿಂತ ಅಧಿಕ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬಂದಿ ರಕ್ತದಾನ ಮಾಡಿದರು. ಯೇನಪೊಯ ವಿ.ವಿ. ಉಪ ಕುಲಪತಿ ಡಾ| ಎಂ. ವಿಜಯ ಕುಮಾರ್‌ ಸ್ವಾಗತಿಸಿದರು. ಯೇನಪೊಯ ವಿ.ವಿ. ಕುಲಸಚಿವ ಡಾ| ಶ್ರೀಕುಮಾರ್‌ ಮೆನನ್‌ ವಂದಿಸಿದರು. ಡಾ| ವೀಣಾ ಪಾಯಸ್‌ ಮತ್ತು ಡಾ| ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English