ಬದಿಯಡ್ಕ: ವಿಶ್ವ ತುಳುವೆರೆ ಆಯನೊದ ಉದ್ದೇಶ ಈಡೇರಿಸುವಲ್ಲಿ ಸರ್ವ ರೀತಿಯ ಸಹಕಾರ ನೀಡುವುದಾಗಿ ಮಾಜಿ ಕೇಂದ್ರ ಸಚಿವ,ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಭರವಸೆ ನೀಡಿದರು.
ವಿಶ್ವ ತುಳುವೆರೆ ಆಯನೊದ ಸಮಿತಿ ಪದಾಧಿಕಾರಿಗಳು ಮಂಗಳವಾರ ಮಂಜೇಶ್ವರದಲ್ಲಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವ ತುಳುವೆರೆ ಆಯನೊ ಚರಿತ್ರೆ ಸೃಷ್ಠಿಸಿ ತುಳು ಭಾಷೆ ಎಂಟನೇ ಪರಿಚ್ಛೆದಕ್ಕೆ ಸೇರ್ಪಡೆಗೊಳಿಸುವಲ್ಲಿ ಸಹಕಾರವಾಗಲಿ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಎ.ವಿವೇಕ ರೈ,ಡಾ.ಡಿ.ಕೆ.ಚೌಟ,ಮಹಾನಗರ ಪಾಲಿಕೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ,ಡಾ.ರಮಾನಂದ ಬನಾರಿ, ಎಂ.ಜೆ.ಕಿಣಿ, ಬಿ.ವಿ.ಕಕ್ಕಿಲ್ಲಾಯ, ಜೀವನ್ ರಾಮ್ ಸುಳ್ಯ, ಕೆ.ಆರ್.ಜಯಾನಂದ, ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಬದಿಯಡ್ಕ, ದೈವರಾಧಕ ಸಮಿತಿ ಸಂಚಾಲಕ ಗೋಪಾಲಕೃಷ್ಣ ಕುಲಾಲ್,ಭಾಸ್ಕರ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English