ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆ

12:20 PM, Thursday, September 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

alwas-nudisiriಮಂಗಳೂರು :ಈ ಬಾರಿ ‘ಕರ್ನಾಟಕ ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಜರಗುವ `ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಸಂಸ್ಕೃತ ಭಾಷಾ ಪ್ರಾಧ್ಯಾಪಕಿಯಾಗಿರುವ ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆಯಾಗಿದ್ದು, ಸಾಹಿತಿ ಡಾ. ಜಯಂತ ಗೌರೀಶ ಕಾಯ್ಕಿಣಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈ ಕುರಿತು ತಿಳಿಸಿದ್ದಾರೆ. ನಿರಂತರ ಆಳ್ವಾಸ್ ನುಡಿಸಿರಿ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು 13ನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದೆ. ನವೆಂಬರ್ 18, 19, 20 ರಂದು ಮೂರು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಅಂದಾಜು 3ರಿಂದ 4 ಕೋಟಿ ರೂ.ಗಳ ವೆಚ್ಚವಾಗಲಿದೆ. ಕಳೆದ ಬಾರಿ ಸರ್ಕಾರ ನುಡಿಸಿರಿ, ವಿರಾಸತ್ ಹಾಗೂ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೆಚ್ಚವಾಗಿ 15 ಲಕ್ಷ ರೂ.ವನ್ನು ನೀಡಿದೆ ಎಂದರು.

alwas-nudisiriನ.17ಕ್ಕೆ ಒಂದು ದಿನ ಪೂರ್ತಿ ವಿದ್ಯಾಸಿರಿ ಕಾರ್ಯಕ್ರಮ ಆಯೋಜನೆಯಾಗಲಿದೆ. ನ.18 ರಂದು ಕೃಷಿಸಿರಿ ಆರಂಭಗೊಂಡು 3 ದಿನಗಳ ಕಾಲ ನಡೆಯಲಿದೆ. ಇದರೊಂದಿಗೆ 10 ವೇದಿಕೆಯಲ್ಲಿ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಛಾಯಾಚಿತ್ರ ಸ್ಪರ್ಧೆ, ಪುಸ್ತಕ ಪ್ರದರ್ಶನ, ಆಹಾರ ವೈವಿಧ್ಯ, ಕವಿಗೋಷ್ಠಿ, ಸನ್ಮಾನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. 2018ಕ್ಕೆ ವಿಶ್ವ ನುಡಿಸಿರಿಗೆ 15 ವರ್ಷ ತುಂಬುತ್ತಿರುವ ಮತ್ತು ವಿರಾಸತ್‍ಗೆ 25 ವರ್ಷ ತುಂಬಲಿರುವ ಹಿನ್ನೆಲೆ ವಿಶ್ವಮಟ್ಟದ ಕಾರ್ಯಕ್ರಮವನ್ನಾಗಿ `ವಿಶ್ವನುಡಿಸಿರಿ’ಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English