ರಾಜ್ಯ ಸರ್ಕಾರ ಆರಂಭಿಸಿರುವ 161ಕ್ಕೆ ಕರೆ ಮಾಡುವ ಮೂಲಕ ಪಡಿತರ ಕೂಪನ್

4:07 PM, Friday, September 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

khadarಮಂಗಳೂರು: ರಾಜ್ಯ ಸರ್ಕಾರ ಆರಂಭಿಸಿರುವ 161ಕ್ಕೆ ಕರೆ ಮಾಡುವ ಮೂಲಕ ಪಡಿತರ ಕೂಪನ್ ಪಡೆಯುವ ಸರಳ ವಿಧಾನವು ದೇಶದಲ್ಲೇ ಪ್ರಥಮ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಪಡಿತರ ಕೂಪನ್‌‌ಗಾಗಿ ಕ್ಯೂ ನಿಲ್ಲಬೇಕಾಗಿಲ್ಲ. ಮೊಬೈಲ್ ಫೋನ್‌‌ನಲ್ಲಿ ಕ್ಷಣಮಾತ್ರದಲ್ಲಿ ಪಡಿತರದಾರರು ತಮಗೆ ಬೇಕಾದ ಆಹಾರ ಸಾಮಗ್ರಿಗಳ ಕೂಪನ್ ಪಡೆಯಬಹುದು. ಪಂಚಾಯತ್‌ನಲ್ಲೂ ಕೂಪನ್‌ ಪಡೆಯುವ ವ್ಯವಸ್ಥೆಯಿದೆ ಎಂದರು.

ಈ ಮೊದಲು ಮೂರು ತಿಂಗಳಿಗೊಮ್ಮೆ ಕೂಪನ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಸಮಸ್ಯೆಗಳು ಉಂಟಾಗದಂತೆ ತಡೆಯುವ ಉದ್ದೇಶದಿಂದ ಪ್ರತಿ ತಿಂಗಳು ಕೂಪನ್ ನೀಡಲಾಗುವುದು ಎಂದು ತಿಳಿಸಿದರು. ಇದೀಗ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ನೀಡಲಾಗುವ ತಲಾ 3 ಕೆಜಿ ಅಕ್ಕಿ, 2 ಕೆಜಿ ಗೋಧಿ ಬದಲಿಗೆ ಜನರಿಗೆ ಅಗತ್ಯಕ್ಕೆ ತಕ್ಕಂತೆ 5 ಕೆಜಿ ಅಕ್ಕಿ ವಿತರಿಸಲಾಗುವುದು. ಗೋಧಿ, ಅಕ್ಕಿ, ರಾಗಿಯನ್ನು ಅಗತ್ಯಕ್ಕೆ ತಕ್ಕಂತೆ ನೀಡಲಾಗುವುದು. ಸೆಪ್ಟೆಂಬರ್‌ನಲ್ಲಿ 4 ಕೆಜಿ ಅಕ್ಕಿ, 1 ಕೆಜಿ ಗೋಧಿ ವಿತರಿಸಲಾಗುವುದು ಎಂದರು.

ರಾಜ್ಯ ಸರ್ಕಾರ ಮೀನುಗಾರರಿಗೆ ಪ್ರತಿ ತಿಂಗಳು 1,300 ಲೀಟರ್ ಸೀಮೆಎಣ್ಣೆಯನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ನೀಡಬೇಕು ಎಂದು ಹೇಳಿದರು.

ಇನ್ನು ಕಾವೇರಿ ಜಲವಿವಾದವನ್ನು ಪರಿಹರಿಸಲು ಕೇಂದ್ರ ಮಧ್ಯ ಪ್ರವೇಶದ ಬಗ್ಗೆ ಒತ್ತಾಯಿಸಲಾಗಿದ್ದರೂ ಕೇಂದ್ರ ಕಿವಿಗೊಡಲಿಲ್ಲ. ಜನಸಾಮಾನ್ಯರ ಕಾಳಜಿಯಿರುವ ಸರ್ಕಾರ ಯಾವುದೇ ತ್ಯಾಗಕ್ಕೂ ಸಿದ್ಧ ಎಂದ ಅವರು, ರಾಜ್ಯದ ಬೇಡಿಕೆ ಬಗ್ಗೆ ಕೇಂದ್ರ ಕಿವಿಗೊಡದಿದ್ದರೂ ನ್ಯಾಯಾಲಯ ಮಾತುಕತೆಗೆ ಸೂಚನೆ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಆಸೆಗೆ ಅಂಟಿಕೊಂಡಿಲ್ಲ. ಯಾವುದೇ ಹಂತದಲ್ಲಿಯೂ ನಾವು ಮುಖ್ಯಮಂತ್ರಿಗಳ ಜೊತೆ ಇರುತ್ತೇವೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English