ಬೆಂಗಳೂರು, : ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ಹಾಸನ ಹಾಗೂ ಮೈಸೂರು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ರಾಮಚಂದ್ರಗೌಡರು ಅವರ ನಿರ್ಣಯವನ್ನು ಸ್ವಾಗತಿಸಿದ್ದಾರೆ.
ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ್ ನಡೆದಿಲ್ಲ ಎಂದು ರಾಜ್ಯ ಹೈಕೋರ್ಟ್ ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಆದರೆ ಆಸ್ಪತ್ರೆಗಳ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಸಚಿವ ರಾಚಂಗೌಡ ಅವರ ಅಫಿಡವಿಟ್ ಅನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಸಿಎಂ ಯಡಿಯೂರಪ್ಪ ಅವರು ಸಿಬ್ಬಂದಿ ನೇಮಕಾತಿಯನ್ನು ರದ್ದುಗೊಳಿಸಿ ಚೀನಾ ಪ್ರವಾಸಕ್ಕೆ ಹೊರಟಿದ್ದಾರೆ . ಚೀನಾಕ್ಕೆ ಐದು ದಿನಗಳ ವಾಣಿಜ್ಯ ಪ್ರವಾಸಕ್ಕೆ ಹೋಗಿರುವ ಸಿಎಂ ಹಿಂತಿರುಗಿ ಬರುವವರೆಗೂ ಕಾಯುವ ಗೋಜಿಗೆ ಹೋಗದೆ, ಪಕ್ಷದ ಹಿತದೃಷ್ಟಿಯಿಂದ ಹಿರಿಯ ನಾಯಕರ ಆದೇಶ ಪಾಲನೆಯ ಸಲುವಾಗಿ ರಾಜೀನಾಮೆ ನೀಡಿದ್ದೇನೆ ಎಂದು ರಾಮಚಂದ್ರಗೌಡ ಹೇಳಿದ್ದಾರೆ.
Click this button or press Ctrl+G to toggle between Kannada and English