ಮಂಗಳೂರು: ವಿಮಾನ ನಿಲ್ದಾಣ ಮೂಲಕ ದುಬೈಯಿಂದ ಅಕ್ರಮವಾಗಿ 32.91 ಲಕ್ಷ ರೂ. ಮೌಲ್ಯದ 1.05 ಕೆ.ಜಿ. ಚಿನ್ನ ಸಾಗಿಸಲು ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಏರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ ಆರೋಪಿ ಸೆ. 27ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲೆತ್ನಿಸಿದ್ದ. ಅನುಮಾನ ಬಂದು ತಪಾಸಣೆ ನಡೆಸಿದಾಗ ಆತನ ಬಳಿ ಸಿಲಿಂಡರ್ ರೂಪದ ಚಿನ್ನದ ರಾಡ್ ಪತ್ತೆಯಾಗಿತ್ತು. ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೇವಲ ಸೆಪ್ಟೆಂಬರ್ ತಿಂಗಳೊಂದರಲ್ಲೇ ಚಿನ್ನದಂತಹ ದುಬಾರಿ ವಸ್ತುಗಳ ಸಾಗಾಟದ18 ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸುಮಾರು 52 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, 12.74 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English