ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು: ಜಗದೀಶ್

12:15 PM, Monday, October 3rd, 2016
Share
1 Star2 Stars3 Stars4 Stars5 Stars
(No Ratings Yet)
Loading...

jagadeeshಮಂಗಳೂರು: ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಮರಳುಗಾರಿಕೆಗೆ ಮತ್ತೆ ಅನುಮತಿ ನೀಡಿದ್ದಾರೆಂಬ ಶಂಕೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಅವರು, ಪರವಾನಗಿ ನಿಯಮದಂತೆ ಮರಳುಗಾರಿಕೆ ನಡೆಸುವ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೆ. ಆಗ ಕೆಲವು ಮಂದಿ ನಿಯಮದಲ್ಲಿ ವಿನಾಯ್ತಿ ನೀಡುವಂತೆ ಆಗ್ರಹಿಸಿದ್ದರು. ಆದರೆ ಅದಕ್ಕೆ ಒಪ್ಪದ ಕಾರಣ, ಎಲ್ಲ ಷರತ್ತುಗಳಿಗೆ ಬದ್ಧವಾಗಿರುತ್ತೇವೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಷರತ್ತು ಮೀರದಂತೆ ಮರಳುಗಾರಿಕೆ ನಡೆಸುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮರಳುಗಾರಿಕೆಗೆ ನೋಂದಣಿಯಾದ ಸಣ್ಣ ಬೋಟ್‌ಗಳನ್ನು ಬಳಸಬೇಕು. ಗುರುತುಹಾಕಿದ ಮರಳ ದಿಣ್ಣೆಯಿಂದ ಮರಳುಗಾರಿಕೆ ನಡೆಸಬೇಕು. ಸಿಆರ್‌ಜಡ್‌ನ 250 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ. ಸೇತುವೆಯ ಕೆಳಭಾಗದಲ್ಲಿ 500 ಮೀಟರ್‌ವರೆಗೆ ಮರಳುಗಾರಿಕೆ ನಿಷೇಧ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮರಳುಗಾರಿಕೆ ನಡೆಸಬಹುದು.

ಕೈಯಿಂದಲೇ ಮರಳನ್ನು ಲೋಡ್ ಮಾಡಬೇಕು. ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಮರಳು ಸಾಗಾಟ ಹಾದಿಯಲ್ಲಿ ರಸ್ತೆ ಹಾಳಾದರೆ ಅದನ್ನು ಮರಳು ಗುತ್ತಿಗೆದಾರರೇ ಸರಿಪಡಿಸಬೇಕು. ಇಲ್ಲದಿದ್ದರೆ ಅವರ ಮರಳುಗಾರಿಕೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English