ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಅಕ್ಟೋಬರ್ 13 ರಂದು ತೆರೆಗೆ

3:25 PM, Wednesday, October 5th, 2016
Share
1 Star2 Stars3 Stars4 Stars5 Stars
(No Ratings Yet)
Loading...

barsa-filmಮಂಗಳೂರು: ಬೊಳ್ಳಿ ಮೂವೀಸ್ ಲಾಂಚನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದ ’ಬರ್ಸ’ ತುಳು ಸಿನಿಮಾ ಸೆನ್ಸಾರ್‌ನಲ್ಲಿ ಯು ಸರ್ಟಿಪಿಕೇಟ್ ಪಡೆದಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಬರ್ಸ ಪಾತ್ರವಾಗಿದೆ. ಇದೀಗ ಈ ಸಿನಿಮಾವನ್ನು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೆ ಭರದ ಸಿದ್ದತೆ ನಡೆಸಲಾಗಿದೆ. ಅಕ್ಟೋಬರ್ 13 ರಂದು ಕರವಳಿ ಜಿಲ್ಲೆಯಾದ್ಯಂತ ಸಿನಿಮಾತೆರೆಗೆ ಬರಲಿದೆ.

ಅರ್ಜುನ್ ಕಾಪಿಕಾಡ್ ನಾಯಕ ನಟನಾಗಿರುವ ಬರ್ಸ ಸಿನಿಮಾದಲ್ಲಿ ಲವ್ ಸೆಂಟಿಮೆಂಟ್, ಫೈಟ್ ಕ್ವಾಮಿಡಿ ಎಲ್ಲವೂ ಇದೆ. ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಚಂಡಿಕೋರಿಯಂತೆ ಬರ್ಸ ಕೂಡಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುತ್ತಾರೆ ನಿರ್ದೇಶಕ ದೇವದಾಸ್ ಕಾಪಿಕಾಡ್.

ಕ್ಷಮಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷಣ್ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸಂತೋಶ್ ಶೆಟ್ಟಿ, ಸತೀಶ್ ಬಂದಲೆ, ತಿಮ್ಮಪ್ಪ ಕುಲಾಲ್, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸುರೇಶ್ ಕುಲಾಲ್, ಮೊದಲಾದವರು ತಾರಾಗಣದಲ್ಲಿದ್ದಾರೆ.

barsa-filmಹಿನ್ನೆಲೆ ಸಂಗೀತ ಮಣಿಕಾಂತ್ ಕದ್ರಿ, ಪಿ.ಎಲ್ ರವಿ, ಪಿ.ಎಲ್.ರವಿ. ಛಾಯಾಗ್ರಹಣ, ಸಾಹಸಃಮಾಸ್ ಮಾದ ಸಂಕಲನಃಸುಜಿತ್ ನಾಯಕ್, ಸಚಿನ್ ಎ ಎಸ್‌ಉಪ್ಪಿನಂಗಡಿ ಎಕ್ಸ್ ಕ್ಯೂಟಿವ್ ಪ್ರೊಡ್ಯೂಸರ್, ನಿರ್ಮಾಣ ನಿರ್ವಹಣೆ ರಾಜೇಶ್ ಕುಡ್ಲ, ಕತೆ, ಚಿತ್ರಕತೆ, ಸಾಹಿತ್ಯ ಸಂಭಾಷಣೆ, ಸಂಗೀತ ನಿರ್ದೇಶನ ದೇವದಾಸ್ ಕಾಪಿಕ್ಕಾಡ್, ಶರ್ಮಿಳಾ ಡಿ. ಕಾಪಿಕ್ಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ ಕಿಣಿ, ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಕ್ಕಾಗಿ ಬಹುಬಾಷಾ ಗಾಯಕ ಕಾತ್ರಿಕ್, ದೇವದಾಸ್ ಕಾಪಿಕ್ಕಾಡ್, ಅರ್ಜುನ್ ಕಾಪಿಕ್ಕಾಡ್,ರೂಪಾ ಮಹದೇವನ್ಹಾಡಿದ್ದಾರೆ.

ತಾಸೆದ ಪೆಟ್ಟ್‌ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನ…..?
ತಾಸೆದ ಪೆಟ್ಟ್‌ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನ.., ಆಸೆದ ಕಣ್ಣ್‌ಡ್ ಊರುದ ಪೊಣ್ಣುಲು ತೆಲಿಪುನ ಮರ್ಲ್ ತೂಯನಾ. ಹಗೂ ಸತ್ಯೊದಾ ತುಡರಗೇ..ತುಳುನಡ್ ಬೊಲ್ಪಾತ್ಂಡ್ ಹಡು ಈಗ ಸಿನಿಪ್ರೇಕ್ಷಕರ ಬಾಯಲ್ಲಿ ಗುಣುಗುಟ್ಟುತ್ತಿದೆ. ತಾಸೆದ ಪೆಟ್ಟ್ ಹಾಡು ತುಳುನಾಡಿನ ಹುಲಿವೇಷ ಕುಣಿತವನ್ನು ಬಿಂಬಿಸುತ್ತದೆ. ಈ ಎರಡೂ ಹಾಡುಗಳನ್ನು ಹಾಡಿದ್ದು ನಿರ್ದೇಶಕ ದೇವದಾಸ್ ಕಾಪಿಕಾಡ್. ಚಿತ್ರದಲ್ಲಿ ಬರುವ ಮತ್ತೆ ಎರಡು ಹಾಡುಗಳು ಮೋನೆಡ್ ನಿನ್ನ ಹಾಗೂ ಓ ಮೈ ಬೇಬಿ ಹಾಡನ್ನು ಅರ್ಜುನ್ ಕಾಪಿಕಾಡ್ ಹಾಡಿದ್ದಾರೆ. ನಾಲ್ಕು ಹಾಡುಗಳು ಈಗ ಸೂಪರ್ ಹಿಟ್ ಆಗಿದೆ.

barsa-film

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English