ಮಹಾಯುದ್ಧದ ನಂತರವಷ್ಟೆ ಪಾಕಿಸ್ತಾನ ಬುದ್ಧಿ ಕಲಿಯಲಿದೆ: ಮಾತೆ ಮಾಣಿಕೇಶ್ವರಿ

10:57 AM, Thursday, October 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

matha-manikeshwariಕಲಬುರಗಿ: ಪ್ರಪಂಚದಲ್ಲಿ ಅಧರ್ಮ ಹಾಗೂ ಪಾಪ ಮಾಡುವರ ಸಂಖ್ಯೆ ಹೆಚ್ಚುತ್ತಿದೆ. ಮಾನವನ ವಿನಾಶಕ್ಕೆ ದಾರಿಯಾಗಿರುವ ಅಧರ್ಮವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ನಡೆದಾಡುವ ದೇವತೆ ಯಾನಗುಂದಿ ಮಾತೆ ಮಾಣಿಕೇಶ್ವರಿ ಅಮ್ಮನವರು ತಿಳಿಸಿದ್ದಾರೆ.

ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕ್ಯಗಿರಿ ಬೆಟ್ಟದ ತಮ್ಮ ಗುಹೆಯಲ್ಲಿ ಪ್ರಥಮ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ದುಷ್ಟತನ ಮೆರೆಯುತ್ತಿದೆ. ಈ ಎಲ್ಲದರ ಪರಿಣಾಮ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವುದು ಖಚಿತವೆಂದು ಮಾಣಿಕೇಶ್ವರಿ ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ನಿತ್ಯ ಹೆಚ್ಚಾಗುತ್ತಿರುವ ಭಯೋತ್ಪಾದನೆ ಭಾರತ-ಪಾಕ್ ಯುದ್ಧದ ನಂತರವೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.

ಭಾರತದ ಶಕ್ತಿ ಅಡಗಿಸಲು ಪ್ರಯತ್ನ ನಡೆಸುತ್ತಲೇ ಪಾಕಿಸ್ತಾನ ತನ್ನ ದೇಶವನ್ನೂ ನಾಶ ಮಾಡಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಮುಸ್ಲಿಂರು ತಮ್ಮವರನ್ನೇ ಕೊಂದು ಅಧರ್ಮ ಮೆರೆಯುತ್ತಿದ್ದಾರೆ. ಭಾರತದ ಸಹನೆಯೇ ಪಾಕಿಸ್ತಾನಕ್ಕೆ ಆಯುಧವಾಗಿ ಮಾರ್ಪಟ್ಟಿದೆ ಎಂದು ಮಾರ್ಮಿಕವಾಗಿ ನುಡಿದ ಮಾಣಿಕೇಶ್ವರಿ ಅವರು, ಮಹಾಯುದ್ಧದ ನಂತರವಷ್ಟೆ ಪಾಕಿಸ್ತಾನ ಬುದ್ಧಿ ಕಲಿಯಲಿದೆ ಎಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English