ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ

12:23 PM, Saturday, October 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

kollur-shree-mookambikaಉಡುಪಿ: ಜಿಲ್ಲೆಯ ಐತಿಹಾಸಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್‌‌.ಡಿ. ದೇವೇಗೌಡ ಭೇಟಿ ನೀಡಿದ್ದರು. ಪತ್ನಿ ಚೆನ್ನಮ್ಮ ಅವರ ಜೊತೆ ಆಗಮಿಸಿದ ಗೌಡರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇಂದು ಬೆಳಗ್ಗೆ ಶೃಂಗೇರಿಯಿಂದ ಕೊಲ್ಲೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಾಜಕೀಯ ಗೊಂದಲಕ್ಕೆ ಬಲಿಯಾದ ಕಾವೇರಿ ವಿವಾದಕ್ಕೆ ವಿಷಾಧ ವ್ಯಕ್ತಪಡಿಸಿದರು. ಮಹದಾಯಿ ಹೋರಾಟಕ್ಕೂ ತಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ಸರ್ವರಿಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ, ತಮ್ಮ ಕೊನೆಯ ದಿನಗಳನ್ನ ಪಕ್ಷ ಸಂಘಟನೆಗೆ ಮೀಸಲು ಇಡುತ್ತೇನೆ. ಮೊಮ್ಮಗ ನಿಖಿಲ್‌ ಕುಮಾರ್‌ ಅಭಿನಯದ ಜಾಗ್ವಾರ್ ಸಿನಿಮಾ ಯಶಸ್ಸು ಗಳಿಸುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಬಳಿಕ ಮೈಸೂರಿನ ಚಾಮುಂಡಿ ದೇವಿ ದರ್ಶನಕ್ಕೆ ದೇವೇಗೌಡರು ತೆರಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English