ಹೆಬ್ಟಾವಿನೊಂದಿಗೆ ಸೆಣಸಿ ಪಾರಾದ ಬಾಲಕನ ಮನೆಯಂಗಳದಲ್ಲಿ ಮತ್ತೆ ಪ್ರತ್ಯಕ್ಷವಾದ ಹೆಬ್ಟಾವು

2:07 PM, Saturday, October 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

pythonಮಂಗಳೂರು: ಹೆಬ್ಟಾವಿನೊಂದಿಗೆ ಸೆಣಸಿ ಪ್ರಾಣಾಪಾಯದಿಂದ ಪಾರಾದ ಬಂಟ್ವಾಳ ತಾಲೂಕು ಸಜೀಪ ಸಮೀಪದ ಕೊಳಕೆಯ ಬಾಲಕ ವೈಶಾಖ್‌ (11) ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾನೆ.

ವಿಲಕ್ಷಣ ವಿದ್ಯಮಾನ ಎಂಬಂತೆ ಬಾಲಕ ಮನೆಗೆ ತಲುಪಿದಾಗ ಮನೆಯಂಗಳದಲ್ಲಿ ಹೆಬ್ಟಾವೊಂದು ಮತ್ತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ.

ಆದರೆ ಈ ಹೆಬ್ಟಾವು ಕಳೆದ ಮಂಗಳವಾರ ಬಾಲಕನನ್ನು ಕಚ್ಚಿದ ಹೆಬ್ಟಾವೇ ಎಂಬುದು ಖಚಿತವಾಗಿಲ್ಲ. ಜನ ಸೇರುತ್ತಿದ್ದಂತೆ ಹೆಬ್ಟಾವು ಪೊದೆಯಲ್ಲಿ ಸೇರಿ ಮರೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದ್ದಾರೆ.

ಸಜೀಪ ಗ್ರಾಮದ ಕೊಳಕೆ ಕೂಡೂರಿನ ಸುರೇಶ್‌ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ ಸಜೀಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ವೈಶಾಖ್‌ ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಬಂದು ಉಪಾಹಾರ ಸೇವಿಸಿ ಸಮೀಪದಲ್ಲಿ ಇರುವ ಅಜ್ಜನ ಮನೆಗೆ ತೆರಳಿ ತನ್ನ ಮನೆಗೆ ವಾಪಸಾಗುತ್ತಿದ್ದಾಗ ಪೊದೆಗಳೆಡೆಯಿಂದ ಬಂದ ಹೆಬ್ಟಾವು ಏಕಾ ಏಕಿ ಆತನ ಮೇಲೆರಗಿತ್ತು. ಹಾವಿನೊಂದಿಗೆ ಸೆಣಸಿ ಆತ ಅಪಾಯದಿಂದ ಪಾರಾಗಿದ್ದನು.

ದೇಹದ ಮೇಲೆ ಹಲವಾರು ಗಾಯಗಳಾದ ಹಿನ್ನೆಲೆಯಲ್ಲಿ ಆತನನ್ನು ಅದೇ ದಿನ ರಾತ್ರಿ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಮೀಪದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯ ತ್ಯಾಜ್ಯ ಡಂಪಿಂಗ್‌ ಯಾರ್ಡ್‌ ನಿರ್ಮಾಣಗೊಳ್ಳುತ್ತಿದೆ. ಈ ಪ್ರದೇಶ ನಿರ್ಜನವಾಗಿದ್ದು, ವಿವಿಧೆಡೆ ಹೆಬ್ಟಾವು ಮತ್ತು ಇತರ ಹಾವುಗಳು ಮನೆ ಪರಿಸರದಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಾರೆ. ಅವು ಪರಿಸರದಲ್ಲಿ ಕಾಣ ಸಿಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English