ಮಂಗಳೂರು: ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ ಕರ್ನಾಟಕ ರಾಜ್ಯ ಕೇಂದ್ರ ನೀಡುವ ಪ್ರಸಿದ್ಧ ಎಂಜಿನಿಯರ್ ವರ್ಷದ ಪ್ರಶಸ್ತಿಗೆ 2016ನೇ ಸಾಲಿಗೆ ಭಂಡಾರಿ ಫೌಂಡೇಷನ್ ಮುಖ್ಯಸ್ಥ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಿದ್ಧ ಎಂಜಿನಿಯರ್‌ಗಳು, ಡಿಆರ್‌ಡಿಒ, ಐಐಎಸ್‌ಸಿ, ಎನ್‌ಎಎಲ್, ವಿಎಸ್‌ಎಸ್‌ಸಿ ವಿಜ್ಞಾನಿಗಳು, ನಿವೃತ್ತ ಎಂಜಿನಿಯರ್‌ಗಳು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಜಿನಿಯರ್‌ಗಳ ಕೊಡುಗೆಯನ್ನು ಪರಿಗಣಿಸಿ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಡಾ. ಮಂಜುನಾಥ್ ಭಂಡಾರಿ ಅವರು “ಕೋರ್ ವಲಯ ಸುಧಾರಿಸುವಲ್ಲಿ ಯುವ ಎಂಜಿನಿಯರ್‌ಗಳ ಕೌಶಲ ಅಭಿವೃದ್ಧಿ: ದೃಷ್ಟಿಕೋನ 2025’ ವಿಷಯ ಕುರಿತು ಮಾತನಾಡಿ, ನಮ್ಮ ಎಂಜಿನಿಯರ್ ಶಿಕ್ಷಣ ಅನ್ನದಂತಹ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರೀಕರಿಸಬೇಕು. ಆದ್ದರಿಂದ ನಾವು 2025ರ ನಿರೀಕ್ಷೆಗಳಿಗೆ ಪೂರ್ವಭಾವಿಯಾಗಿ ತಯಾರಾಗಬೇಕಿದೆ. ಆದರೆ ನಮ್ಮ ಶಿಕ್ಷಣ ಕ್ರಿಯಾತ್ಮಕ ಸವಾಲುಗಳನ್ನು ಎದುರಿಸಲು ಕೌಶಲ ನೀಡುತ್ತಿಲ್ಲ.
ಬೌದ್ಧಿಕ ಬಂಡವಾಳವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಮ್ಮ ಭಾಷಣದಲ್ಲಿ ಕೇಂದ್ರೀಕರಿಸಿದ ಅವರು, ಪ್ರಸಿದ್ಧ ಸಂಸ್ಥೆಗಳಾದ ಐಐಎಸ್‌ಸಿ, ಐಐಟಿ, ಎನ್‌ಐಟಿಗಳ ಬೌದ್ಧಿಕ ಬಂಡವಾಳಗಳು ಸಮಾಜದ ಮೇಲೆ ನೇರ ಪರಿಣಾಮ ಬೀರಲಿದ್ದು, ಪ್ರತಿಭಾಪಲಾಯನವಾಗದಂತೆ ನೋಡಿಕೊಳ್ಳಬೇಕು ಎಂದರು.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಕುಶಲ ವಿಶೇಷ ಗುಣವನ್ನು ಸ್ಮರಿಸಿದ ಭಂಡಾರಿ ಅವರು, ಬದಲಾಗುತ್ತಿರುವ ವಿಶ್ವದಲ್ಲಿ ಪ್ರತಿಯೊಬ್ಬರು ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಪ್ರಶಸ್ತಿ ಬರಲು ಕಾರಣವಾದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಪ್ರಶಂಸಿದರು.
ದೂರದೃಷ್ಟಿತ್ವದ ಉದ್ಯಮಿ, ಶಿಕ್ಷಣತಜ್ಞ ಮತ್ತು ರಾಜಕಾರಣಿಯಾದ ಡಾ. ಮಂಜುನಾಥ್ ಭಂಡಾರಿ ಅವರು ಶಿಕ್ಷಣದಲ್ಲಿ ಹೊಸ ದೃಷ್ಟಿಕೋನದ ಚಿಂತನೆ ನಡೆಸುತ್ತಿದ್ದಾರೆ. ಇವರ ಕ್ರಿಯಾಶೀಲ ನಾಯಕತ್ವದಿಂದಾಗಿ ಶಿಕ್ಷಣದಲ್ಲಿ ಹಲವು ಸುಧಾರಣೆ ತಂದಿದ್ದಾರೆ. ಸಮಾಜದಲ್ಲಿ ಉದ್ಯಮ ಬೆಳವಣಿಗೆಗೆ ಇವರು ಬೆನ್ನೆಲುಬಾಗಿ ನಿಂತಿದ್ದಾರೆ. ಇವರು ಯುಎಸ್‌ಎದ ಫಿಲೆಡೆಲ್ಫಿಯಾದ ಐಸನ್‌ಹೋವರ್ ಫೌಂಡೇಶನ್ ನೀಡುವ ಐಸೆನ್ ಹೋವರ್ ಫೆಲೋಶಿಫ್ ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಇವರನ್ನು ವಿಶೇಷ ಆಹ್ವಾನಿತರಾಗಿ ನಾಮನಿರ್ದೆಶನ ಮಾಡಿದೆ. ಅಲ್ಲದೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನೀಡುವ ಎರಡನೇ ಕರ್ನಾಟಕ ಶಿಕ್ಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Click this button or press Ctrl+G to toggle between Kannada and English